ಬಾಂಗ್ಲಾ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿತ್ತು. ತಂಡವು 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದಾಗ ಕ್ರೀಸ್'ನಲ್ಲಿ ಶಬ್ಬೀರ್ 18 ರನ್ ಗಳಿಸಿ ಆಡುತ್ತಿದ್ದರು.
ನಿನ್ನೆಯಷ್ಟೆ ಹೈದರಾಬಾದ್'ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಭರ್ಜರಿ 208 ರನ್'ಗಳಿಂದ ಗೆದ್ದುಕೊಂಡಿತು. ಈ ಪಂದ್ಯದ ದ್ವಿತೀಯ ಇನ್ನಿಂಗ್ಸ್'ನಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಬಾಂಗ್ಲಾದ ಪ್ರಬಲ ಬ್ಯಾಟ್ಸ್'ಮೆನ್ ಶಬ್ಬೀರ್ ರೆಹಮಾನ್'ನನ್ನು ಔಟ್ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ.ಬಾಂಗ್ಲಾ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿತ್ತು. ತಂಡವು 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದಾಗ ಕ್ರೀಸ್'ನಲ್ಲಿ ಶಬ್ಬೀರ್ 18 ರನ್ ಗಳಿಸಿ ಆಡುತ್ತಿದ್ದರು.
ಆ ಸಮಯದಲ್ಲಿ ಬೌಲಿಂಗ್ ಮಾಡುತ್ತಿದ್ದ ಇಶಾಂತ್ ಶರ್ಮಾರ ಒಂದು ಚಂಡನ್ನು ಶಬ್ಬೀರ್ ಡೆಪೆನ್ಸ್ ಮಾಡಿದರು. ಆಗ ಇಬ್ಬರ ಆಟಗಾರರ ನಡುವೆ ಕೆಲಕಾಲ ದೃಷ್ಟಿಯುದ್ಧ ನಡೆಯಿತು. ಹೆಚ್ಚು ಗುರಾಯಿಸಬೇಡ ಎಂದು ಶಬ್ಬೀರ್ ಹೇಳಿದರೂ ಬಾಂಗ್ಲಾದ ಆಟಗಾರ ಮಾತ್ರ ಗುರಾಯಿಸುವ ಕೆಟ್ಟ ಚಾಳಿಯನ್ನು ಬಿಡಲಿಲ್ಲ. ನಂತರ ಬೌಲಿಂಗ್ ಮಾಡಿದ ಇಶಾಂತ್ ಶರ್ಮಾ ಅಹಂಕಾರ ತೋರಿದ ಶಬ್ಬೀರ್'ನನ್ನು ಎಲ್'ಬಿಡಬ್ಲ್ಯು ಬಲೆಗೆ ಕೆಡವಿ ಪೆವಿಲಿಯನ್ ಕಡೆ ಹೋಗುವಂತೆ ಸೂಚಿಸಿದರು. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗಿದೆ. ಪಂದ್ಯದ ನಂತರ ಸ್ಪಷ್ಟಿಕರಣ ನೀಡಿದ ಇಶಾಂತ್ ಇದು ಆರೋಗ್ಯಕರ ನೋಟವಲ್ಲದೆ ಮತ್ತೇನಿಲ್ಲ ಎಂದು ತಿಳಿಸಿದ್ದಾರೆ.
