ಐಪಿಎಲ್'ನಲ್ಲಿ ಹರಾಜಾಗದ ಇಶಾಂತ್ ಶರ್ಮಾ ಕೌಂಟಿ ಕ್ರಿಕೆಟ್'ನತ್ತ..

First Published 16, Feb 2018, 3:45 PM IST
Ishant Sharma for Sussex
Highlights

'ಪ್ರಥಮ ದರ್ಜೆ ಕೌಂಟಿ ಕ್ರಿಕೆಟ್'ನಲ್ಲಿ ಸಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ನನಗೆ ತುಂಬಾ ಸಂತೋಷವೆನಿಸುತ್ತದೆ. ಸೆಸೆಕ್ಸ್ ತಂಡದ ಪರ ಆಡಲು ತುದಿಗಾಲಿನಲ್ಲಿದ್ದೇನೆ' ಎಂದು ದೆಹಲಿ ವೇಗಿ ಶರ್ಮಾ ಹೇಳಿದ್ದಾರೆ.

ನವದೆಹಲಿ(ಫೆ.16): ಇದೇ ಜನವರಿಯಲ್ಲಿ ನಡೆದಿದ್ದ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ಬಿಕರಿಯಾಗದ ಭಾರತದ ವೇಗಿ ಇಶಾಂತ್ ಶರ್ಮಾ, ಇಂಗ್ಲೆಂಡ್ ಕೌಂಟಿಯತ್ತ ಮುಖ ಮಾಡಿದ್ದಾರೆ.

ಇಂಗ್ಲೆಂಡ್'ನ ಸಸೆಕ್ಸ್ ಕ್ರಿಕೆಟ್ ಕ್ಲಬ್ ಜತೆ ಇಶಾಂತ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಏ.4ರಿಂದ ಜೂ.4ರ ತನಕ ಸಸೆಕ್ಸ್ ಪರವಾಗಿ ಶರ್ಮಾ ಆಡಲಿದ್ದಾರೆ ಎಂದು ಕ್ಲಬ್ ಖಚಿತ ಪಡಿಸಿತು. ಏಪ್ರಿಲ್ 4 ರಿಂದ ಜೂನ್ 4ರ ವರೆಗೆ ಇಶಾಂತ್ ಸಸೆಕ್ಸ್ ತಂಡಕ್ಕೆ ಲಭ್ಯವಿದ್ದಾರೆ ಎನ್ನಲಾಗಿದೆ. ಆದರೆ ಬಿಸಿಸಿಐನಿಂದ ಇಶಾಂತ್‌ಗಿನ್ನೂ ಅನುಮತಿ ಸಿಕ್ಕಿಲ್ಲ.

'ಪ್ರಥಮ ದರ್ಜೆ ಕೌಂಟಿ ಕ್ರಿಕೆಟ್'ನಲ್ಲಿ ಸಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ನನಗೆ ತುಂಬಾ ಸಂತೋಷವೆನಿಸುತ್ತದೆ. ಸೆಸೆಕ್ಸ್ ತಂಡದ ಪರ ಆಡಲು ತುದಿಗಾಲಿನಲ್ಲಿದ್ದೇನೆ' ಎಂದು ದೆಹಲಿ ವೇಗಿ ಶರ್ಮಾ ಹೇಳಿದ್ದಾರೆ.

ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಪಿಯೂಶ್ ಚಾವ್ಲಾ ಬಳಿಕ ಸಸೆಕ್ಸ್ ತಂಡದ ಪರ ಕೌಂಟಿ ಕ್ರಿಕೆಟ್‌'ನಲ್ಲಿ ಆಡಲಿರುವ 3ನೇ ಭಾರತೀಯ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಇಶಾಂತ್ ಶರ್ಮಾ ಪಾತ್ರರಾಗಲಿದ್ದಾರೆ.

loader