Asianet Suvarna News Asianet Suvarna News

ಇಶಾಂತ್ ಶರ್ಮಾ ಪಾಲಿಗೆ ಎಂದೆಂದೂ ಮರೆಯಲಾಗದ ಐಪಿಎಲ್ ಟೂರ್ನಿಯಿದು

ಲೀಗ್ ಹಂತದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಒಟ್ಟು ಆರು ಪಂದ್ಯಗಳನ್ನಾಡಿದ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

Ishant Sharma Ends with wicket less IPL tournament

ಬೆಂಗಳೂರು(ಮೇ.15): ಟೀಂ ಇಂಡಿಯಾದ ಹಿರಿಯ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಪ್ರಸಕ್ತ ಐಪಿಎಲ್'ನಲ್ಲಿ ಒಂದೂ ವಿಕೆಟ್ ಪಡೆಯದೇ ತನ್ನ ಅಭಿಯಾನ ಮುಗಿಸಿದ್ದಾರೆ.

ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ತನ್ನ ಮೂಲ ಬೆಲೆ 2 ಕೋಟಿ ರೂಪಾಯಿ ಇದ್ದರೂ ಯಾವೊಬ್ಬ ಪ್ರಾಂಚೈಸಿಯೂ ಇಶಾಂತ್ ಅವರನ್ನು ಖರೀಧಿಸಲು ಮುಂದೆ ಬಂದಿರಲಿಲ್ಲ. ಆದರೆ ಟೂರ್ನಿಯ ಮಧ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಉದ್ದೇಶದಿಂದ ಡೆಲ್ಲಿ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಲೀಗ್ ಹಂತದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಒಟ್ಟು ಆರು ಪಂದ್ಯಗಳನ್ನಾಡಿದ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.    

Follow Us:
Download App:
  • android
  • ios