ಇವರಿಬ್ಬರು ಸದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಆಡುತ್ತಿಲ್ಲ. ಹೀಗಾಗಿ ನವೆಂಬರ್ 21ರಿಂದ ರಾಜಸ್ಥಾನ ವಿರುದ್ಧ ಡೆಲ್ಲಿ ತಂಡ ರಣಜಿ ಪಂದ್ಯವಾಡಲಿದೆ.
ವಿಶಾಖಪಟ್ಟಣ(ನ.18): ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಡೆಲ್ಲಿ ಆಟಗಾರರಾದ ಇಶಾಂತ್ ಶರ್ಮಾ ಹಾಗೂ ಗೌತಮ್ ಗಂಭೀರ್ ಅವರನ್ನ ರಣಜಿ ಟ್ರೋಫಿ ಪಂದ್ಯವಾಡಲು ಅನುವು ಮಾಡಿಕೊಡುವ ಸಾಧ್ಯತೆ ಇದೆ.
ಇವರಿಬ್ಬರು ಸದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಆಡುತ್ತಿಲ್ಲ. ಹೀಗಾಗಿ ನವೆಂಬರ್ 21ರಿಂದ ರಾಜಸ್ಥಾನ ವಿರುದ್ಧ ಡೆಲ್ಲಿ ತಂಡ ರಣಜಿ ಪಂದ್ಯವಾಡಲಿದೆ.
ಆ ಪಂದ್ಯದಲ್ಲಿ ಆಡಲು ಅನುಮತಿ ನೀಡುವ ಸಾಧ್ಯತೆ ಇದೆ. ಗಾಯಾಳುವಾಗಿ ಚೇತರಿಸಿಕೊಂಡಿರುವ ಶಿಖರ್ ಧವನ್ ಸಹ ಈ ರಣಜಿ ಪಂದ್ಯವನ್ನ ಆಡಲಿದ್ದಾರೆ. ಅಲ್ಲಿಗೆ ಈ ಮೂವರಿಗೆ ಈ ಪಂದ್ಯ ಮಹತ್ವದ್ದಾಗಿದೆ.