ಅಬ್ಬಾ..! ಪಾಕ್'ನಲ್ಲಿ ಟಿ20 ಆಡಲು ವಿಂಡೀಸ್ ಆಟಗಾರರಿಗೆ ನೀಡಿದ ಆಮಿಷವೇನು ಗೊತ್ತಾ..?

First Published 21, Mar 2018, 3:46 PM IST
Is Pakistan Bribing West Indian Players to Tour Pakistan For T20 Cricket Series
Highlights

ಸರಣಿಯಲ್ಲಿ ಆಡುವ ಎಲ್ಲಾ 13 ಸದಸ್ಯರಿಗೆ ತಲಾ 25೦೦೦ ಅಮೆರಿಕನ್ ಡಾಲರ್ (₹16.30 ಲಕ್ಷ) ನೀಡುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ. ಕರಾಚಿಯಲ್ಲಿ ಏ.1, 2 ಹಾಗೂ 3ರಂದು ಪಂದ್ಯಗಳು ನಡೆಯಲಿವೆ.

ಜಮೈಕಾ(ಮಾ.21): ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ 3 ಪಂದ್ಯಗಳ ಟಿ2೦ ಸರಣಿಯಲ್ಲಿ ಪಾಲ್ಗೊಳ್ಳಲು, ವೆಸ್ಟ್‌'ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ಮುಂದೆ ಭರ್ಜರಿ ಪ್ರಸ್ತಾಪವಿಟ್ಟಿದೆ.

ಸರಣಿಯಲ್ಲಿ ಆಡುವ ಎಲ್ಲಾ 13 ಸದಸ್ಯರಿಗೆ ತಲಾ 25೦೦೦ ಅಮೆರಿಕನ್ ಡಾಲರ್ (₹16.30 ಲಕ್ಷ) ನೀಡುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ. ಕರಾಚಿಯಲ್ಲಿ ಏ.1, 2 ಹಾಗೂ 3ರಂದು ಪಂದ್ಯಗಳು ನಡೆಯಲಿವೆ.

2009ರಲ್ಲಿ ಲಂಕಾ ಆಟಗಾರರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ, ಜಿಂಬಾಬ್ವೆ ಹೊರತು ಪಡಿಸಿ ಇನ್ಯಾವ ತಂಡವೂ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಭದ್ರತೆ ಸಮಸ್ಯೆಯಿಂದಾಗಿ ಆಟಗಾರರು ಪಾಕ್‌'ಗೆ ತೆರಳಲು ಹಿಂಜರಿಯಬಹುದು ಎನ್ನುವ ದೃಷ್ಟಿಯಿಂದ ವಿಂಡೀಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ

loader