Asianet Suvarna News Asianet Suvarna News

ಸ್ವಿಂಗ್ ಬೌಲರ್ ಇರ್ಫಾನ್ ಪಠಾಣ್ ಈಗ ಏನು ಮಾಡುತ್ತಿದ್ದಾರೆ?

ಆರು ವರ್ಷಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿರುವ ಸ್ವಿಂಗ್ ವೇಗಿ ಇರ್ಫಾನ್ ಪಠಾಣ್ ಸದ್ಯ ಏನು ಮಾಡುತ್ತಿದ್ದಾರೆ? ವೀಕ್ಷಕ  ವಿವರಣೆ, ಕ್ರಿಕೆಟ್ ವಿಶ್ಲೇಷಕರಾಗಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇರ್ಫಾನ್ ಕ್ರಿಕೆಟ್ ಭವಿಷ್ಯ ಏನು? ಇಲ್ಲಿದೆ ವಿವರ

Irfan Pathan to look after final selections in Jammu and Kashmir

ಜಮ್ಮುಕಾಶ್ಮೀರ(ಜು.02): ಪಾಕಿಸ್ತಾನ ದಿಗ್ಗಜ ವಾಸಿಮ್ ಅಕ್ರಮ್‌ನಿಂದ ಹೊಗಳಿಸಿಕೊಂಡಿದ್ದ ಇರ್ಫಾನ್ ಪಠಾಣ್, ಭಾರತ ಕಂಡ ಯಶಸ್ವಿ ಬೌಲರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ 2012ರ ವೇಳೆಗೆ ಇರ್ಫಾನ್ ಪಠಾಣ್ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆ ಎದುರಿಸಿ ತಂಡದಿಂದ ಹೊರಬಿದ್ದರು. ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಹರಸಾಹಸ ಪಟ್ಟರು ಸಾಧ್ಯಾವಾಗಿಲ್ಲ.

ರಣಜಿ, ಐಪಿಎಲ್ ಕ್ರಿಕೆಟ್‌ನಲ್ಲಿ ಸಕ್ರೀಯವಾಗಿದ್ದ ಐರ್ಫಾನ್ 11ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲೂ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ವೀಕ್ಷಕ ವಿವರಣೆಗಾರನಾಗಿ, ವಿಶ್ಲೇಷಕನಾಗಿ ಟಿವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇರ್ಫಾನ್ ಸದ್ಯ ಏನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ. ಸದ್ಯ  ಇರ್ಫಾನ್ ಪಠಾಣ್, ಜಮ್ಮ ಮತ್ತು ಕಾಶ್ಮೀರ ತಂಡದ ಮೆಂಟರರ್ ಆಗಿ ಆಯ್ಕೆಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿರುವ ಇರ್ಫಾನ್ , ರಣಜಿ ತಂಡದಲ್ಲಿ ಕ್ರಿಕೆಟಿಗನಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಇರ್ಫಾನ್ ಎರಡು ಜವಾಬ್ದಾರಿಗಳನ್ನ ನಿರ್ವಹಿಸಲಿದ್ದಾರೆ. 2017ರ ವರೆಗೆ ಬರೋಡಾ ರಣಜಿ ತಂಡದ ಖಾಯಂ ಸದಸ್ಯನಾಗಿದ್ದ ಇರ್ಫಾನ್ ಇದೀಗ ಬರೋಡಾದಿಂದ ಜಮ್ಮ ಕಾಶ್ಮೀರಗೆ ಪ್ರಯಾಣ ಮಾಡಿದ್ದಾರೆ. 

33 ವರ್ಷದ ಇರ್ಫಾನ್ ಪಠಾಣ್ ಭಾರತದ ಪರ 29 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯ ಆಡಿದ್ದಾರೆ.  2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಇರ್ಫಾನ್, 2012ರ ವರೆಗೆ ಟೀಂ ಇಂಡಿಯಾದಲ್ಲಿ ಸಕ್ರೀಯರಾಗಿದ್ದರು. ಬಳಿಕ ತಂಡದಿಂದ ಹೊರಬಿದ್ದರು. 
 

Follow Us:
Download App:
  • android
  • ios