ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ ಪ್ರಕಟ

Ireland announce squad for T20I series against India
Highlights

ಭಾರತದ ವಿರುದ್ಧದ ಎರಡು ಪಂದ್ಯಗಳ ಸರಣಿಯ ಪೈಕಿ ಮೊದಲ ಪಂದ್ಯ ಜೂನ್ 27ರಂದು ಡುಬ್ಲಿನ್’ನಲ್ಲಿ ನಡೆದರೆ, ಎರಡು ದಿನಗಳ ಬಳಿಕ [29] ಇದೇ ಮೈದಾನದಲ್ಲಿ ಎರಡನೇ ಪಂದ್ಯ ಜರುಗಲಿದೆ.

ಡುಬ್ಲಿನ್[ಜೂ.22]: ಇದೇ ತಿಂಗಳಾಂತ್ಯದಲ್ಲಿ ಭಾರತದ ವಿರುದ್ಧ ನಡೆಯಲಿರುವ 2 ಟಿ20 ಪಂದ್ಯಗಳಿಗೆ 14 ಆಟಗಾರರನ್ನೊಳಗೊಂಡ ಐರ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಗ್ಯಾರಿ ವಿಲ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತದ ವಿರುದ್ಧದ ಎರಡು ಪಂದ್ಯಗಳ ಸರಣಿಯ ಪೈಕಿ ಮೊದಲ ಪಂದ್ಯ ಜೂನ್ 27ರಂದು ಡುಬ್ಲಿನ್’ನಲ್ಲಿ ನಡೆದರೆ, ಎರಡು ದಿನಗಳ ಬಳಿಕ [29] ಇದೇ ಮೈದಾನದಲ್ಲಿ ಎರಡನೇ ಪಂದ್ಯ ಜರುಗಲಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅನುಭವ ಪಡೆಯಲು ಆಟಗಾರರಿಗೆ ಅವಕಾಶ ಕಲ್ಪಿಸುವುದನ್ನು ಮುಂದುವರೆಸುತ್ತಿದ್ದೇವೆ. 12 ತಿಂಗಳೊಳಗಾಗಿ ವಿಶ್ವಕಪ್ ಟಿ20 ಟೂರ್ನಿಗೆ ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯಲಿವೆ. ಹೀಗಾಗಿ ಬಲಿಷ್ಠ ತಂಡವನ್ನು ಕಟ್ಟುವುದರೊಂದಿಗೆ 2020ರ ಟಿ20 ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಐರ್ಲೆಂಡ್ ಆಯ್ಕೆ ಸಮಿತಿ ಅಧ್ಯಕ್ಷ ಆ್ಯಂಡ್ರೊ ವೈಟ್ ಹೇಳಿದ್ದಾರೆ.

ಐರ್ಲೆಂಡ್ ತಂಡ ಹೀಗಿದೆ:
ಗ್ಯಾರಿ ವಿಲ್ಸನ್[ನಾಯಕ], ಆ್ಯಂಡ್ರೊ ಬಾಲ್’ಬೈರ್ನಿ, ಪೀಟರ್ ಚೇಸ್, ಜಾರ್ಜ್ ಡಾಕ್ರೆಲ್, ಜೋಸ್ ಲಿಟ್ಲ್, ಆ್ಯಂಡ್ರೊ ಮೆಕ್’ಬ್ರೈನ್, ಕೆವಿನ್ ಒ ಬ್ರಿಯಾನ್, ವಿಲಿಯಮ್ ಫೋರ್ಟರ್’ಫಿಲ್ಡ್, ಸ್ಟುವರ್ಟ್ ಪೋಯ್ಟರ್, ಬೋಯ್ಡ್ ರ‍್ಯಾಂಕಿನ್, ಜೇಮ್ಸ್ ಶೆನಾನ್, ಸಿಮಿ ಸಿಂಗ್, ಪೌಲ್ ಸ್ಟೆರ್ಲಿಂಗ್, ಸ್ಟುವರ್ಟ್ ಥಾಮ್ಸನ್.

loader