19 ವರ್ಷದ ರಶೀದ್'ಗೆ 9 ಕೋಟಿ: ಮಾಯಾಂಕ್ ಸೇರಿ ಮೂವರು ಕನ್ನಡಿಗರು ಪಂಜಾಬ್ ಪಾಲು

First Published 27, Jan 2018, 5:12 PM IST
IPL Player Auction Rashid Khan 19 Retained By Hyderabad
Highlights

ಇಂದು ಹರಾಜಾಗಿರುವ 6 ಮಂದಿ ಕರ್ನಾಟಕದ ಆಟಗಾರರಲ್ಲಿ ಮೂವರನ್ನು ಪಂಜಾಬ್ ತಂಡ ಖರೀದಿಸಿದೆ. ಕೆ.ಎಲ್. ರಾಹುಲ್ 11 ಕೋಟಿ, ಕರಣ್ ನಾಯರ್ 5.4 ಕೋಟಿ ಹಾಗೂ ಮಯಾಂಕ್ ಅಗರ್'ವಾಲ್  1 ಕೋಟಿಗೆ ಖರೀದಿಯಾಗಿದ್ದಾರೆ.

ಬೆಂಗಳೂರು(ಜ.27): ಅಫ್ಘಾನಿಸ್ತಾನದ ಕ್ರಿಕೆಟಿಗ 19 ವರ್ಷದ ಕ್ರಿಕೆಟಿಗ ರಶೀದ್ ಖಾನ್ ಸನ್ ರೈಸರ್ಸ್ ಹೈದರಾಬಾದ್ ತಂಡ 9 ಕೋಟಿಗೆ ಖರೀದಿಸಿದೆ. ಕಳೆದ ವರ್ಷ ಹೈದರಾಬಾದ್ ತಂಡ 4 ಕೋಟಿ ನೀಡಿ ಕೊಂಡುಕೊಂಡಿತ್ತು.  ಇದೇ ತಂಡದಲ್ಲಿ ಕನ್ನಡಿಗ ಆಟಗಾರ ಮನೀಶ್ ಪಾಂಡೆ 11 ಕೋಟಿಗೆ ಹರಾಜಾಗಿದ್ದಾರೆ. ಶಿಖರ್ ಧವನ್ ಹಾಗೂ ವೃದ್ಧಿಮಾನ್ ಷಾ ಅವರನ್ನು ಕ್ರಮವಾಗಿ 5.20 ಹಾಗೂ  5 ಕೋಟಿಗೆ ಖರೀದಿಸಿದೆ.

ಇಂದು ಹರಾಜಾಗಿರುವ 6 ಮಂದಿ ಕರ್ನಾಟಕದ ಆಟಗಾರರಲ್ಲಿ ಮೂವರನ್ನು ಪಂಜಾಬ್ ತಂಡ ಖರೀದಿಸಿದೆ. ಕೆ.ಎಲ್. ರಾಹುಲ್ 11 ಕೋಟಿ, ಕರಣ್ ನಾಯರ್ 5.4 ಕೋಟಿ ಹಾಗೂ ಮಯಾಂಕ್ ಅಗರ್'ವಾಲ್  1 ಕೋಟಿಗೆ ಖರೀದಿಯಾಗಿದ್ದಾರೆ. ರಾಬಿನ್ ಉತ್ತಪ್ಪ ಮೂಲ ಬೆಲೆ 6.40 ಕೋಟಿಗೆ ಕೋಲ್ಕತ್ತ ತಂಡದಲ್ಲಿ ಉಳಿದುಕೊಂಡಿದ್ದಾರೆ. ಆಲ್'ರೌಂಡರ್ ಸ್ಟುವರ್ಟ್ ಬಿನ್ನಿ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಮೂಲ ಬೆಲೆ 50 ಲಕ್ಷಕ್ಕೆ ರಿಟೈನ್ ಮಾಡಿಕೊಂಡಿದೆ.

ರಾಯಲ್ಸ್ ತಂಡ ಸ್ಟೋಕ್ಸ್ ಅವರನ್ನು ಇಂದಿನ ಹರಾಜಿನಲ್ಲಿ ಅತೀ ಹೆಚ್ಚು 12.5 ಕೋಟಿ ನೀಡಿ ಖರೀದಿಸಿದೆ. ಇನ್ನುಳಿದಂತೆ ಕ್ರಿಸ್ ಲಿನ್ ಕೋಲ್ಕತ್ತಾ ತಂಡಕ್ಕೆ 9.60 ಕೋಟಿ, ಮಿಷಲ್ ಸ್ಟಾರ್ಕ್ 9.40 ಕೋಟಿ, ದಿನೇಶ್ ಕಾರ್ತಿಕ್ 7.40, ಅಶ್ವಿನ್ 7.60, ಫಿಂಚ್ 6.20 ಕೋಟಿ, ಮ್ಯಾಕ್ಸ್'ವೆಲ್ 9 ಕೋಟಿ, ಜಾಧವ್ 7.80 ಕೋಟಿಗೆ ಸೇಲಾಗಿದ್ದಾರೆ.              

loader