ಐಪಿಎಲ್ ವೇಳಾಪಟ್ಟಿಯಲ್ಲಿ ಕಡೇ ಕ್ಷಣದ ಬದಲಾವಣೆ

IPL Play offs And Final to Start at 7pm Keeping Fans in Mind Rajeev Shukla
Highlights

ಐಪಿಎಲ್ ಆರಂಭಕ್ಕೂ ಮುನ್ನವೇ ಐಪಿಎಲ್ ಆಡಳಿತ ಮಂಡಳಿಯು ಸಮಯದ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡುವ ಪ್ರಸ್ತಾವನೆಯನ್ನು ಪ್ರಾಂಚೈಸಿಗಳ ಮುಂದಿಟ್ಟಿತ್ತು. ಆದರೆ ಪ್ರಾಂಚೈಸಿಗಳು ಇದಕ್ಕೆ ಸಮ್ಮತಿ ಸೂಚಿಸಿರಿಲಿಲ್ಲ. ಹಾಗಾಗಿ ಹಳೆ ವೇಳಾಪಟ್ಟಿಯನ್ನೇ ಮುಂದುವರೆಸಲಾಗಿತ್ತು.

ನವದೆಹಲಿ[ಮೇ.10]: ಐಪಿಎಲ್ ಆಡಳಿತ ಮಂಡಳಿಯು ಸದ್ಯ ನಡೆಯುತ್ತಿರುವ 11ನೇ ಆವೃತ್ತಿಯ ಪ್ಲೇ ಆಫ್ ಪಂದ್ಯಗಳ ಸಮಯ ಬದಲಿಸಿದೆ. 

ಈ ವಿಷಯ ದೃಢ ಪಡಿಸಿರುವ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ‘ಟೂರ್ನಿ ಆರಂಭವಾದಾಗಿನಿಂದಲೂ ಪಂದ್ಯಗಳು ರಾತ್ರಿ 8ಕ್ಕೆ ಆರಂಭವಾಗುತ್ತಿವೆ. ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳು ಹಿಂದಿರುಗಲು ಕಷ್ಟವಾಗುತ್ತಿದೆ ಎನ್ನುವ ದೃಷ್ಟಿಯಿಂದ ಪ್ಲೇ ಆಫ್ ಪಂದ್ಯಗಳ ಸಮಯವನ್ನು ರಾತ್ರಿ 8ರಿಂದ 7ಕ್ಕೆ ಬದಲಿಸಲಾಗಿದೆ’ ಎಂದು ತಿಳಿಸಿದ್ದಾರೆ. ಇದರಿಂದಾಗಿ 11.30ಕ್ಕೆ ಮುಗಿಯುತ್ತಿದ್ದ ಪಂದ್ಯಗಳು 10.30ಕ್ಕೆ ಮುಕ್ತಾಯಗೊಳ್ಳಲಿವೆ. 

loader