ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಧೋನಿ ನೇತೃತ್ವದ ಚೆನ್ನೈ ಸೂಪರ್'ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ನವದೆಹಲಿ(ಮಾ.28): ಏ.7ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ರಣ್‌ವೀರ್ ಸಿಂಗ್ 15 ನಿಮಿಷಗಳ ಕಾಲ ಪ್ರದರ್ಶನ ನೀಡಲಿದ್ದು, ಅವರಿಗೆ ಬಿಸಿಸಿಐ ₹5 ಕೋಟಿ ಸಂಭಾವನೆ ನೀಡಲಿದೆ ಎನ್ನಲಾಗಿದೆ.

‘ಆಯೋಜನಾ ಸಮಿತಿ ರಣ್ ವೀರ್ ಅವರೇ ಪ್ರಮುಖ ಆಕರ್ಷಣೆಯಾಗಬೇಕು ಎಂದು ನಿರ್ಧರಿಸಿತು. ಈ ಕಾರಣ, ದೊಡ್ಡ ಮೊತ್ತದ ಬೇಡಿಕೆಯಿಟ್ಟರೂ ಬಿಸಿಸಿಐ ಒಪ್ಪಿಕೊಂಡಿದೆ’ ಎನ್ನಲಾಗಿದೆ.

ರಣ್‌ವೀರ್ ಜತೆ ವರುಣ್ ಧವನ್, ಜ್ಯಾಕ್ವೆಲಿನ್ ಫರ್ನಾಂಡೆಸ್, ಪರಿಣಿತಿ ಚೋಪ್ರಾ ಹಾಗೂ ತಮನ್ಹಾ ಸಹ ಪ್ರದರ್ಶನ ನೀಡಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಧೋನಿ ನೇತೃತ್ವದ ಚೆನ್ನೈ ಸೂಪರ್'ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.