ಚೆನ್ನೈನಿಂದ ಸ್ಥಳಾಂತರಗೊಂಡ ಐಪಿಎಲ್ ಪಂದ್ಯಗಳು..! ಸಿಎಸ್'ಕೆ ಅಭಿಮಾನಿಗಳಿಗೆ ನಿರಾಸೆ

First Published 12, Apr 2018, 3:36 PM IST
IPL matches shifted out of Chennai
Highlights

‘ಪ್ರಸ್ತುತ ಇರುವ ಸನ್ನಿವೇಶದಲ್ಲಿ ಸೂಕ್ತ ಭದ್ರತೆ ಒದಗಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದಕಾರಣ ಪಂದ್ಯಗಳು ಚೆನ್ನೈನಿಂದ ಬೇರೆಡೆ ಸ್ಥಳಾಂತರಿಸಬೇಕಾಗಿದೆ. ತನ್ನ ತವರನ್ನು ಪುಣೆಗೆ ಸ್ಥಳಾಂತರಗೊಳಿಸಲು ಚೆನ್ನೈ ಸೂಪರ್ ಕಿಂಗ್ಸ್ ಸಹ ವಿರೋಧ ವ್ಯಕ್ತಪಡಿಸಿಲ್ಲ’ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಚೆನ್ನೈ(ಏ.12): ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಐಪಿಎಲ್ ಪಂದ್ಯಾವಳಿಗೂ ತಾಕಿದೆ. ಆಟಗಾರರ ಭದ್ರತೆಯ ಹಿತದೃಷ್ಟಿಯಿಂದ ಚೆನ್ನೈನಲ್ಲಿ ನಡೆಯಬೇಕಾಗಿರುವ ಐಪಿಎಲ್ ಇನ್ನುಳಿದ 6 ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡಿವೆ.

‘ಪ್ರಸ್ತುತ ಇರುವ ಸನ್ನಿವೇಶದಲ್ಲಿ ಸೂಕ್ತ ಭದ್ರತೆ ಒದಗಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದಕಾರಣ ಪಂದ್ಯಗಳು ಚೆನ್ನೈನಿಂದ ಬೇರೆಡೆ ಸ್ಥಳಾಂತರಿಸಬೇಕಾಗಿದೆ. ತನ್ನ ತವರನ್ನು ಪುಣೆಗೆ ಸ್ಥಳಾಂತರಗೊಳಿಸಲು ಚೆನ್ನೈ ಸೂಪರ್ ಕಿಂಗ್ಸ್ ಸಹ ವಿರೋಧ ವ್ಯಕ್ತಪಡಿಸಿಲ್ಲ’ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗುವ ತನಕ ಚೆನ್ನೈನಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಬಾರದು ಅಥವಾ ಪಂದ್ಯಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೇ ಮಂಗಳವಾರ ಚೆನ್ನೈ ಹಾಗೂ ಕೋಲ್ಕತಾ ನೈಟ್‌'ರೈಡರ್ಸ್‌ ವಿರುದ್ಧ ನಡೆದ ಪಂದ್ಯಕ್ಕೂ ಪ್ರತಿಭಟನೆ ಬಿಸಿ ತಾಕಿತ್ತು. ಭಾರೀ ಭದ್ರತೆಯ ನಡುವೆಯೂ ಚೆನ್ನೈ ತಂಡದ ರವೀಂದ್ರ ಜಡೇಜಾರ ಮೇಲೆ ಶೂ ಎಸೆತದಂತಹ ಅಹಿತಕರ ಘಟನೆ ಸಹ ನಡೆದಿತ್ತು.

loader