Asianet Suvarna News Asianet Suvarna News

ಐಪಿಎಲ್ 2018: ಬಿಸಿಸಿಐನಿಂದ ಪ್ರತಿ ತಂಡಕ್ಕೆ 150 ಕೋಟಿ!

ಸೆ. ರಂದು ಬಿಸಿಸಿಐ ಮುಂದಿನ 5 ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ವಿತರಿಸಲಿದೆ. ಇದರಿಂದ ಕೇವಲ ಕ್ರಿಕೆಟ್ ಮಂಡಳಿಗಳಿಗೆ ಮಾತ್ರವಲ್ಲ ಎಲ್ಲಾ 8 ಫ್ರಾಂಚೈಸಿ ತಂಡಗಳಿಗೂ ಭಾರೀ ಲಾಭವಾಗುವ ನಿರೀಕ್ಷೆ ಇದೆ. 2018ರ ಐಪಿಎಲ್ ಪಂದ್ಯಾವಳಿ ಮೊದಲ ಎಸೆತ ಕಾಣುವುದಕ್ಕೂ ಮುನ್ನವೇ ಪ್ರತಿ ತಂಡಕ್ಕೂ 150 ಕೋಟಿ ಸಿಗಲಿದೆ ಎಂದು ಹೇಳಲಾಗಿದೆ

IPL Franchise set for rupees 150 crore windfall next season

ನವದೆಹಲಿ(ಸೆ.01): ಸೆ. ರಂದು ಬಿಸಿಸಿಐ ಮುಂದಿನ 5 ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ವಿತರಿಸಲಿದೆ. ಇದರಿಂದ ಕೇವಲ ಕ್ರಿಕೆಟ್ ಮಂಡಳಿಗಳಿಗೆ ಮಾತ್ರವಲ್ಲ ಎಲ್ಲಾ 8 ಫ್ರಾಂಚೈಸಿ ತಂಡಗಳಿಗೂ ಭಾರೀ ಲಾಭವಾಗುವ ನಿರೀಕ್ಷೆ ಇದೆ. 2018ರ ಐಪಿಎಲ್ ಪಂದ್ಯಾವಳಿ ಮೊದಲ ಎಸೆತ ಕಾಣುವುದಕ್ಕೂ ಮುನ್ನವೇ ಪ್ರತಿ ತಂಡಕ್ಕೂ 150 ಕೋಟಿ ಸಿಗಲಿದೆ ಎಂದು ಹೇಳಲಾಗಿದೆ

ಅಂದಾಜಿನ ಪ್ರಕಾರ ಮಾಧ್ಯಮ ಪ್ರಸಾರ ಹಕ್ಕು ವಿತರಣೆಯಿಂದ ಬಿಸಿಸಿಐ ಮುಂದಿನ 5 ವರ್ಷಕ್ಕೆ (2018-2022) ಕನಿಷ್ಠ ₹12000-14000 ಕೋಟಿ ಪಡೆಯಲಿದೆ ಎನ್ನಲಾಗಿದೆ. ಇದರೊಂದಿಗೆ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿರುವ ‘ವೀವೋ’ ಸಂಸ್ಥೆ ಈಗಾಗಲೇ ₹700-800 ಸಿಗಲಿದೆ. ಒಟ್ಟಾರೆಯಾಗಿ ಬಿಸಿಸಿಐನ ಆದಾಯ 2199 ಕೋಟಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಇನ್ನೂ ಮೂರು ನಾಲ್ಕು ಅಧಿಕೃತ ಪ್ರಾಯೋಜಕರಿಂದ ಬಿಸಿಸಿಐಗೆ 700-800 ಸಿಗಲಿದೆ.

ಒಟ್ಟಾರೆಯಾಗಿ ಬಿಸಿಸಿಐನ ಆದಾಯ 15000 ತಲುಪಲಿದೆ. ಅಂದರೆ ವರ್ಷಕ್ಕೆ 3000 ಕೋಟಿ ಆದಾಯ ಬಿಸಿಸಿಐ ಬೊಕ್ಕಸಕ್ಕೆ ಸೇರಲಿದೆ. ಒಪ್ಪಂದದಂತೆ ಮುಂದಿನ ವರ್ಷದಿಂದ ಬಿಸಿಸಿಐ ತನ್ನ ಆದಾಯದ ಶೇ.40೦ರಷ್ಟನ್ನು ಫ್ರಾಂಚೈಸಿಗಳಿಗೆ ಹಂಚಲಿದೆ. ಅಂದರೆ 1200 ಕೋಟಿಯನ್ನು 8 ಫ್ರಾಂಚೈಸಿಗಳಿಗೆ ತಲಾ 150 ಕೋಟಿಯಂತೆ ನೀಡಲಿದೆ. ವರದಿಗಳ ಪ್ರಕಾರ ಆಟಗಾರರ ಸಂಭಾವನೆ, ಫ್ರಾಂಚೈಸಿ ಮೊತ್ತ, ನಿರ್ವಹಣೆ ವೆಚ್ಚ ಎಂದು ಪ್ರತಿ ತಂಡ ವರ್ಷಕ್ಕೆ 120-130 ಕೋಟಿ ಖರ್ಚು ಮಾಡಲಿವೆ.

Follow Us:
Download App:
  • android
  • ios