ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಹರಾಜಿಗೆ ಕ್ಷಣಗಣನೆ

First Published 26, Jan 2018, 10:30 PM IST
IPL Auction Begin Tomorrow
Highlights

ಈ ಬಾರಿ ಒಟ್ಟು 578 ಆಟಗಾರರು ಹರಾಜು ಪ್ರಕ್ರಿಯೆಗೆ ಒಳಪಡಲಿದ್ದಾರೆ. ಇದರಲ್ಲಿ 350 ಭಾರತೀಯ ಆಟಗಾರರು ಸೇರಿಕೊಂಡಿದ್ರೆ, 216 ವಿದೇಶಿ ಆಟಗಾರರೂ ಲೀಸ್ಟ್​​​​​​ನಲ್ಲಿದ್ದಾರೆ

ದೇಶದಲ್ಲಿ ಕೋಟ್ಯಾಂತರ ಅಭಿಮಾನಿಗಳ ನಾಡಿಮಿಡಿತ ಹೆಚ್ಚಿಸಿರೋ 11ನೇ ಐಪಿಎಲ್​​​​​ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಗೆಲ್ಲೋ ಕುದುರೆ ಮೇಲೆ ಕೋಟಿ ಕೋಟಿ ಹಣ ಸುರಿಯಲು ಫ್ರಾಂಚೈಸಿಗಳು ಸ್ಟಾಟರ್ಜಿ ರೂಪಿಸಿವೆ. ಈ ಬಾರಿ ಒಟ್ಟು 578 ಆಟಗಾರರು ಹರಾಜು ಪ್ರಕ್ರಿಯೆಗೆ ಒಳಪಡಲಿದ್ದಾರೆ. ಇದರಲ್ಲಿ 350 ಭಾರತೀಯ ಆಟಗಾರರು ಸೇರಿಕೊಂಡಿದ್ರೆ, 216 ವಿದೇಶಿ ಆಟಗಾರರೂ ಲೀಸ್ಟ್​​​​​​ನಲ್ಲಿದ್ದಾರೆ. ಅಲ್ಲದೇ 13 ಇಂಡಿಯನ್​​ ಪ್ಲೇಯರ್ಸ್​ 2 ಕೋಟಿ ಮೂಲ ಬೆಲೆಯನ್ನು ಘೋಷಿಸಿಕೊಂಡಿದ್ದು, ತೀವ್ರ ಕುತೂಹಲ ಮೂಡಿಸಿದ್ದಾರೆ.

loader