ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಕನ್ನಡಿಗನಿಗೆ ಮಣೆ ಹಾಕಿದೆ. ಆರ್‌ಸಿಬಿ ತಂಡ ಸೇರಿಕೊಂಡ ಕನ್ನಡಿಗ ಯಾರು?
ಜೈಪುರ(ಡಿ.18): ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗನನ್ನ ಖರೀದಿಸಿದೆ. ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್‌ಗೆ 20 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ.
ಮೊದಲ ಸೆಶನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವೆಸ್ಟ್ಇಂಡೀಸ್ ಯುವ ಬ್ಯಾಟ್ಸ್‌ಮನ್ ಶಿಮ್ರೊಮ್ ಹೆಟ್ಮೆಯರ್ ಅವರನ್ನ 4.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಟೀಂ ಇಂಡಿಯಾ ಆಲ್ರೌಂಡರ್ ಗುರಕೀರತ್ ಸಿಂಗ್ ಮಾನ್ ಅವರನ್ನ 50 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. ಆದರೆ ಎರಡನೇ ಸೆಶನ್‌ನಲ್ಲಿ ಆರ್‌ಸಿಬಿ ತಂಡ ಯಾರನ್ನೂ ಖರೀದಿಸಲಿಲ್ಲ.
