Asianet Suvarna News Asianet Suvarna News

ಐಪಿಎಲ್ ಹರಾಜು 2019: 16 ವರ್ಷದ ಪೋರನಿಗೆ 1.5 ಕೋಟಿ ನೀಡಿದ ಆರ್‌ಸಿಬಿ

ಐಪಿಎಲ್ ಟೂರ್ನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಖರೀದಿಸಿದ ಆಟಗಾರರು ಯಾರು? ಇಲ್ಲಿದೆ 
 

IPL Auction 2019 RCB rope South Africa Wicket keeper for 50 lakh
Author
Bengaluru, First Published Dec 18, 2018, 6:51 PM IST

ಜೈಪುರ(ಡಿ.18): ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಳೆದು ತೂಗಿ ಆಟಗಾರರನ್ನ ಖರೀದಿಸುತ್ತಿದೆ. ಇದೀಗ 16 ವರ್ಷದ ಪೋರನಿಗೆ ಬರೋಬ್ಬರಿ 1.5 ಕೋಟಿ ನೀಡಿ ಖರೀದಿಸಿದೆ. ಬಂಗಾಳ ಮೂಲದ ಪ್ರಯಾಸ್ ರೇ ಬರ್ಮನ್‌ಗೆ 1.5 ಕೋಟಿ ರೂಪಾಯಿ ನೀಡಿ ಖರೀದಿಸಿದೆ.  2018-19ರ ವಿಜಯ್ ಹಜಾರೆ ಟೂರ್ನಿಯಲ್ಲಿ ಬಂಗಾಳ ಪರ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಪ್ರಯಾಸ್ ಪಾತ್ರನಾಗಿದ್ದಾನೆ.

ಇದನ್ನೂ ಓದಿ: ಕನ್ನಡಿಗನನ್ನ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ವೆಸ್ಟ್ಇಂಡೀಸ್ ಕ್ರಿಕೆಟಿಗ ಶಿಮ್ರೊನ್ ಹೆಟ್ಮೆಯರ್‌ಗೆ 4.2 ಕೋಟಿ ರೂಪಾಯಿ ಖರೀದಿಸಿದರೆ, ಮುಂಬೈ ಯುುವ ಕ್ರಿಕೆಟಿಗ ಶಿವಂ ದುಬೆನನ್ನ ಬರೋಬ್ಬರಿ 5 ಕೋಟಿ ರೂಪಾಯಿಗೆ ಖರೀದಿಸಿತು. ಟೀಂ ಇಂಡಿಯಾ ಆಲ್ರೌಂಡರ್ ಗುರಕೀರತ್ ಸಿಂಗ್ ಮಾನ್ ಅವರನ್ನ 50 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿತು. ಕನ್ನಡಿಗ ದೇವತ್ ಪಡಿಕ್ಕಲ್‌ಗೆ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿತು.  ಸೌತ್ಆಫ್ರಿಕಾ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್‌ಗೆ 50 ಲಕ್ಷ ರೂಪಾಯಿ ನೀಡಿ ಖರೀದಿಸಿತು.

ಇದನ್ನೂ ಓದಿ: ಬರೋಬ್ಬರಿ 5 ಕೋಟಿ ನೀಡಿ ಶಿವಂ ದುಬೆ ಖರೀದಿಸಿದ RCB

ಐಪಿಎಲ್ ಹರಾಜು 2019: 4.2 ಕೋಟಿಗೆ RCB ಪಾಲಾದ ಶಿಮ್ರೊನ್ ಹೆಟ್ಮೆಯರ್ 
ಐಪಿಎಲ್ ಹರಾಜು 2019: 50 ಲಕ್ಷಕ್ಕೆ ಗುರಕೀರತ್ ಸಿಂಗ್ ಮಾನ್ ಖರೀದಿಸಿದ RCB
ಐಪಿಎಲ್ ಹರಾಜು 2019: ಕನ್ನಡಿಗ ದೇವದತ್ ಪಡಿಕ್ಕಲ್ ಆರ್‌ಸಿಬಿ ಪಾಲು
ಐಪಿಎಲ್ ಹರಾಜು 2019: 5 ಕೋಟಿಗೆ RCB ಪಾಲಾದ ಶಿವಂ ದುಬೆ
ಐಪಿಎಲ್ ಹರಾಜು 2019: ಹೆನ್ರಿಚ್ ಕ್ಲಾಸೆನ್ 50 ಲಕ್ಷಕ್ಕೆ RCB ಪಾಲು

ಐಪಿಎಲ್ ಹರಾಜು 2019: 65 ಲಕ್ಷಕ್ಕೆ  ಹಿಮ್ಮತ್ ಸಿಂಗ್ ಖರೀದಿಸಿದ ಆರ್‌ಸಿಬಿ
ಐಪಿಎಲ್ ಹರಾಜು 2019: ಮಿಲಿಂದ್ ಕುಮಾರ್ 20 ಲಕ್ಷಕ್ಕೆ ಆರ್‌ಸಿಬಿ ತೆಕ್ಕೆಗೆ

ಐಪಿಎಲ್ ಹರಾಜು 2019: ಪ್ರಯಾಸ್ ರೇ ಬರ್ಮನ್ 1.5 ಕೋಟಿಗೆ ಆರ್‌ಸಿಬಿ ಪಾಲು

Follow Us:
Download App:
  • android
  • ios