ಜೈಪುರ(ಡಿ.18): ಐಪಿಎಲ್ 12ನೇ ಆವೃತ್ತಿ ಹರಾಜು ಪ್ರಕ್ರಿಯೆಲ್ಲಿ ಶಿವಂ ದುಬೆ, ವರುಣ್ ಚಕ್ರವರ್ತಿ ಸೇರಿದಂತೆ ಹಲವು ಯುವ ಕ್ರಿಕೆಟಿಗರು ಗರಿಷ್ಠ ಮೊತ್ತಕ್ಕೆ ಸೇಲಾದರೆ, ಕರ್ನಾಟಕದ ಬಹುತೇಕ ಬೌಲರ್‌ಗಳು ಮಾರಾಟವಾಗದೇ ಉಳಿದಿದ್ದಾರೆ.

ಮೊದಲ ಸುತ್ತಿನ ಹರಾಜಿನಲ್ಲಿ ಕರ್ನಾಟಕ ಹಿರಿಯ ವೇಗಿ ಆರ್ ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಸ್ಪಿನ್ನರ್ ಕೆ.ಸಿ ಕಾರ್ಯಪ್ಪ, ಜೆ.ಸುಚಿತ್ ಹರಾಜಾಗದೇ ಉಳಿದಿದ್ದಾರೆ. ಕನ್ನಡಿಗರ ಪೈಕಿ ದೇವದತ್ ಪಡಿಕ್ಕಲ್ ಮೂಲ ಬೆಲೆ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.