ನವದೆಹಲಿ[ಆ.20]: 2020ರ ಐಪಿಎಲ್‌ಗೆ ತಂಡಗಳು ಸಿದ್ಧತೆ ಆರಂಭಿಸಿದ್ದು, ಆಸ್ಪ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಬ್ರಾಡ್‌ ಹ್ಯಾಡಿನ್‌ರನ್ನು ಸನ್‌ರೈಸ​ರ್ಸ್ ಹೈದರಾಬಾದ್‌ ತಂಡ ಸಹಾಯಕ ಕೋಚ್‌ ಆಗಿ ನೇಮಕ ಮಾಡಿಕೊಂಡಿದೆ.

ವಿಶ್ವಕಪ್ ಗೆದ್ದ ಇಂಗ್ಲೆಂಡ್ ಕೋಚ್ ಈಗ ಸನ್‌ರೈಸರ್ಸ್‌ ಗುರು..!

ಹ್ಯಾಡಿನ್‌ 2015ರ ಏಕದಿನ ವಿಶ್ವಕಪ್‌ ವಿಜೇತ ಆಸ್ಪ್ರೇಲಿಯಾ ತಂಡದ ಸದಸ್ಯರಾಗಿದ್ದರು. 2016ರಲ್ಲಿ ಆಸ್ಪ್ರೇಲಿಯಾ ಎ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದು ಅವರು, ಸದ್ಯ ಆಸ್ಪ್ರೇಲಿಯಾ ಹಿರಿಯರ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

SRH ಟೂರ್ನಿಯಿಂದ ಔಟ್- ಬಿಕ್ಕಿ ಬಿಕ್ಕಿ ಅತ್ತ ಕೋಚ್ ಟಾಮ್ ಮೂಡಿ!

ಇತ್ತೀಚೆಗಷ್ಟೇ ಸನ್ ರೈಸರ್ಸ್ ಹೈದರಾಬಾದ್ ತಂಡವು ಟಾಮ್ ಮೂಡಿ ಅವರನ್ನು ಕೈಬಿಟ್ಟು, ನೂತನ ಹೆಡ್ ಕೋಚ್ ಆಗಿ ಇಂಗ್ಲೆಂಡ್ ತಂಡದ ಕೋಚ್ ಟ್ರೆವರ್ ಬೇಲಿಸ್ ಅವರನ್ನು ತಮ್ಮ ಪ್ರಧಾನ ಕೋಚ್ ಆಗಿ ನೇಮಕ ಮಾಡಿಕೊಂಡಿತ್ತು. ಟ್ರೆವರ್ ಬೇಲಿಸ್ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 2012 ಹಾಗೂ 2015ರಲ್ಲಿ ತಂಡ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2011ರಲ್ಲಿ ಹ್ಯಾಡಿನ್ ಕೆಕೆಆರ್ ತಂಡದ ಪರ ಕಾಣಿಸಿಕೊಂಡಿದ್ದರು.