ನವದೆಹಲಿ(ಜು.19): ಇಂಗ್ಲೆಂಡ್ ತಂಡಕ್ಕೆ 2019ರ ಐಸಿಸಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಟ್ರೆವರ್ ಬೇಲಿಸ್ ಇದೀಗ ಐಪಿಎಲ್‌ನ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

2013ರಿಂದ ಪ್ರಧಾನ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟಾಮ್ ಮೂಡಿ ಬದಲಾಗಿ ಆಸ್ಟ್ರೇಲಿಯಾದವರೇ ಆದ ಟ್ರೆವರ್ ಬೇಲಿಸ್ ಅವರನ್ನು ನೇಮಕ ಮಾಡಿಕೊಂಡಿದೆ. ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಬೇಲಿಸ್, ಆ್ಯಶಸ್ ಸರಣಿಗೂ ಮುನ್ನವೇ ಇಂಗ್ಲೆಂಡ್ ತಂಡದಿಂದ ನಿರ್ಗಮಿಸಲು ನಿರ್ಧರಿಸಿದ್ದು, ಅದಕ್ಕೂ ಮುನ್ನವೇ ಹೈದರಾಬಾದ್ ಬೇಲಿಸ್ ರನ್ನು ಕೋಚ್ ಆಗಿ ನೇಮಕ ಮಾಡಿದೆ. 

ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

ಮೂಡಿ, ಕಳೆದ 7 ವರ್ಷಗಳಿಂದ ಹೈದರಾಬಾದ್ ತಂಡಕ್ಕೆ ಕೋಚ್ ಆಗಿದ್ದರು. ಮೂಡಿ ಮಾರ್ಗದರ್ಶನದಲ್ಲೇ 2016ರಲ್ಲಿ ಹೈದರಾಬಾದ್ ಐಪಿಎಲ್ ಚಾಂಪಿಯನ್ ಆಗಿತ್ತು. ಇನ್ನು 2018ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.