ಹೈದರಾಬಾದ್(ಮಾ.29): ಐಪಿಎಲ್ ಟೂರ್ನಿಯಲ್ಲಿಂದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಮುಖಾಮುಖಿಯಾಗುತ್ತಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಭರ್ಜರಿ ಕಸರತ್ತು ನಡೆಸಿದೆ.

ಇದನ್ನೂ ಓದಿ: IPL ಕ್ರಿಕೆಟ್‌ನಲ್ಲಿ ದಾಖಲೆ ಬರೆದ RCB ನಾಯಕ ವಿರಾಟ್ ಕೊಹ್ಲಿ!

ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಲು ಹೈದರಾಬಾದ್ ಹಾಗೂ ರಾಜಸ್ಥಾನ ತಯಾರಾಗಿದೆ.  ಮೊದಲ ಪಂದ್ಯದಲ್ಲಿ ಡೇವಿಡ್ ವಾರ್ನರ್ ಉತ್ತಮ ಲಯ ಕಂಡುಕೊಂಡಿದ್ದಾರೆ. ಹೀಗಾಗಿ ಸನ್ ರೈಸರ್ಸ್ ಗೆಲುವಿನ ಫೇವರಿಟ್ ಎಂದು ಬಿಂಬಿತವಾಗಿದೆ.  ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಟೀವ್ ಸ್ಮಿತ್ ಉಪಯುಕ್ತ ಕಾಣಿಕೆ ನೀಡಲು ವಿಫಲರಾಗಿದ್ದಾರೆ. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ ರಾಯಲ್ಸ್ ಬ್ಯಾಲೆನ್ಸ್ ಆಗಿದೆ. ಇಂದಿನ ಪಂದ್ಯಕ್ಕೆ ಸಂಭವನೀಯ ತಂಡ ಇಲ್ಲಿದೆ.

ಇದನ್ನೂ ಓದಿ: ಮುಂಬೈ ವಿರುದ್ಧ RCB ಸೋಲು- ನೋ ಬಾಲ್ ಕುರಿತು ಕೊಹ್ಲಿ ಹೇಳಿದ್ದಿಷ್ಟು!

ಸನ್ ರೈಸರ್ಸ್ ಹೈದರಾಬಾದ್ ಸಂಭನೀಯ ತಂಡ:
ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ. ವಿಜಯ್ ಶಂಕರ್, ಯುಸುಫ್ ಪಠಾಣ್, ಶಕೀಬ್ ಅಲ್ ಹಸನ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ

ರಾಜಸ್ಥಾನ ರಾಯಲ್ಸ್ ಸಂಭವನೀಯ ತಂಡ:
ಅಜಿಂಕ್ಯ ರಹಾನೆ, ಜೋಸ್ ಬಟ್ಲರ್, ಸಂಜು ಸಾಮ್ಸನ್, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ, ಜೋಫ್ರಾ ಆರ್ಚರರ್, ಕೆ ಗೌತಮ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ಧವಲ್ ಕುಲಕರ್ಣಿ