ಬೆಂಗಳೂರು(ಏ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಲೂರು ತಂಡ ಇದೀಗ 6ನೇ ಪ್ರಯತ್ನದಲ್ಲಿ ಗೆಲುವು ಸಾಧಿಸೋ ವಿಶ್ವಾಸದಲ್ಲಿದೆ. ಆರಂಭಿಕ 5 ಪಂದ್ಯದಲ್ಲಿ ಮುಗ್ಗರಿಸಿರುವ RCB ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಹೋರಾಟ ನಡಸೆಲಿದೆ. ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆ ಮಾಡಲು RCB ಮುಂದಾಗಿದೆ.

ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ?

ಕಳೆದ ಪಂದ್ಯದಲ್ಲಿ 205 ರನ್ ಸಿಡಿಸಿ ಸೋಲೊಪ್ಪಿಕೊಂಡ RCB ಬೌಲಿಂಗ್ ವಿಭಾಗದಲ್ಲಿ ಬದಲಾವಣೆಮಾಡಲು ಮುಂದಾಗಿದೆ. ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ದುಬಾರಿಯಾದ ಮೊಹಮ್ಮದ್ ಸಿರಾಜ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಮತ್ತೊರ್ವ ದುಬಾರಿ ಬೌಲರ್ ಟಿಮ್ ಸೌಥಿ ಎರಡನೇ ಅವಕಾಶ ಪಡೆಯೋ ಸಾಧ್ಯತೆ ಇದೆ.

ಇದನ್ನೂ ಓದಿ: IPL ಕ್ರಿಕೆಟ್‌ನಲ್ಲಿ ಅಲ್ಜಾರಿ ಜೋಸೆಫ್ ಸರ್ವ ಶ್ರೇಷ್ಠ ದಾಖಲೆ!

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಎಬಿ ಡಿವಿಲಿಯರ್ಸ್, ಮಾರ್ಕಸ್ ಸ್ಟೊಯ್ನಿಸ್, ಮೊಯಿನ್ ಆಲಿ, ಆಕ್ಷದೀಪ್ ನಾಥ್, ಪವನ್ ನೇಗಿ, ಟಿಮ್ ಸೌಥಿ, ನವದೀಪ್ ಸೈನಿ, ಯಜುವೇಂದ್ರ ಚೆಹಾಲ್, ಉಮೇಶ್ ಯಾದವ್

ಇದನ್ನೂ ಓದಿ: RCBಗೆ ಡೆಲ್ಲಿ ಎದುರಾಳಿ- ಬೆಂಗಳೂರಿನಲ್ಲಿ ಕೊನೆಯಾಗುತ್ತಾ ಸೋಲಿನ ಚಾಳಿ?

ಡೆಲ್ಲಿ ಸಂಭವನೀಯ ತಂಡ:
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೊಲಿನ್ ಇನ್‌ಗ್ರಾಂ, ಕ್ರಿಸ್ ಮೊರಿಸ್, ಆಕ್ಸರ್ ಪಟೇಲ್, ಕಾಗಿಸೋ ರಬಾಡ, ಇಶಾಂತ್ ಶರ್ಮಾ, ಸಂದೀಪ್ ಲಮಿಚಾನೆ, ರಾಹುಲ್ ತಿವಾಠಿಯಾ