IPL ಕ್ರಿಕೆಟ್‌ನಲ್ಲಿ ಅಲ್ಜಾರಿ ಜೋಸೆಫ್ ಸರ್ವ ಶ್ರೇಷ್ಠ ದಾಖಲೆ!

ಅಲ್ಜಾರಿ ಜೊಸೆಫ್ ಕಡಿಮೆ ಬೆಲೆಯಲ್ಲಿ ಮುಂಬೈ ಸೇರಿಕೊಂಡ ವೇಗಿ. ಆದರೆ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ 6 ವಿಕೆಟ್  ಕಬಳಿಸಿ ದಾಖಲೆ ಬರೆದಿದ್ದಾರೆ. ಜೊಸೆಫ್ ಸರ್ವಶ್ರೇಷ್ಠ ದಾಖಲೆ ಯಾವುದು? ಯಾರು ಈ ವೇಗಿ? ಇಲ್ಲಿದೆ ವಿವರ.
 

IPL 2019 Alzarri Joseph registers best ever figures in IPL history

ಹೈದರಾಬಾದ್(ಏ.07): ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 40 ರನ್ ಗೆಲುವು ದಾಖಲಿಸಿದೆ. ಈ ಗೆಲುವಿಗೆ ಮುಖ್ಯ ಕಾರಣ ಮುಂಬೈ ವೇಗಿ ಅಲ್ಜಾರಿ ಜೊಸೆಫ್. ಮುಂಬೈ ಬ್ಯಾಟ್ಸ್‌ಮನ್‌ಗಳು ತಿಣುಕಾಡಿ 137 ರನ್ ಟಾರ್ಗೆಟ್ ನೀಡಿದರು. ತವರಿನಲ್ಲಿ SRH ತಂಡಕ್ಕೆ ಇದು ಸುಲಭ ಟಾರ್ಗೆಟ್. ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನ ಹೊಂದಿರುವ SRH ತಂಡ 96 ರನ್‌ಗೆ ಆಲೌಟ್ ಆಯಿತು. 

ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕ ಹೀಗೆ?

ಮುಂಬೈ ಇಂಡಿಯನ್ಸ್ ವೇಗಿ ಅಲ್ಜಾರಿ ಜೊಸೆಫ್ 12 ರನ್ ನೀಡಿ 6 ವಿಕೆಟ್ ಕಬಳಿಸಿ ಮುಂಬೈ ಗೆಲುವಿನ ರೂವಾರಿಯಾದರು. ಇಷ್ಟೇ ಅಲ್ಲ ಐಪಿಎಲ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಲ್ಜಾರಿ ಜೊಸೆಫ್ ಬೌಲಿಂಗ್ ಸರ್ವಶ್ರೇಷ್ಠ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 2008ರಲ್ಲಿ ಪಾಕಿಸ್ತಾನ ವೇಗಿ ಸೊಹೈಲ್ ತನ್ವೀರ್(ರಾಜಸ್ಥಾನ ರಾಯಲ್ಸ್) CSK ವಿರುದ್ಧ 14 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದೀಗ ಇದೀಗ ಈ ದಾಖಲೆ ಪುಡಿಯಾಗಿದೆ.

ಇದನ್ನೂ ಓದಿ: RCBಗೆ ಡೆಲ್ಲಿ ಎದುರಾಳಿ- ಬೆಂಗಳೂರಿನಲ್ಲಿ ಕೊನೆಯಾಗುತ್ತಾ ಸೋಲಿನ ಚಾಳಿ?

2016ರಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ(ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್) SRH ವಿರುದ್ಧ 19 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನಿಲ್ ಕುಂಬ್ಳೆ, ರಾಜಸ್ಥಾನ ರಾಯಲ್ಸ್ ವಿರುದ್ಧ 5 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.

ಯಾರು ಈ ಅಲ್ಜಾರಿ ಜೊಸೆಫ್:
ಅಲ್ಜಾರಿ ಜೊಸೆಫ್ 22ರ ಹರೆಯದ ಯುವಕ. ಆ್ಯಂಟಿಗುವಾದಲ್ಲಿ ಹುಟ್ಟಿದ ಜೊಸೆಫ್ 2016ರಲ್ಲಿ ವೆಸ್ಟ್ಇಂಡೀಸ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ವಿಶೇಷ ಅಂದರೆ ವಿಂಡೀಸ್ ತಂಡ ಕಂಡ ಕೂಲ್ ವೇಗಿ ಅಲ್ಜಾರಿ ಜೊಸೆಫ್. ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಜೊಸೆಫ್, ವಿಂಡೀಸ್ ಪರ 9 ಟೆಸ್ಟ್, 15 ಏಕದಿನ ಪಂದ್ಯ ಆಡಿದ್ದಾರೆ. ಆಡಮ್ ಮಿಲ್ನೆ ಇಂಜುರಿ ಕಾರಣದಿಂದ ಟೂರ್ನಿ ಆರಂಭದಲ್ಲೇ ತಂಡದಿಂದ ಹೊರಬಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ವಿಂಡೀಸ್ ವೇಗ್ ಅಲ್ಜಾರಿ ಜೊಸೆಫ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: 5 ಪಂದ್ಯ ಸೋತರೂ RCBಗೆ ಇನ್ನೂ ಇದೇ ಪ್ಲೇ ಆಫ್ ಅವಕಾಶ!

75 ಲಕ್ಷ ರೂಪಾಯಿಗೆ ಮುಂಬೈ ಸೇರಿಕೊಂಡ ವೇಗಿ:
ಐಪಿಎಲ್ ನಿಯಮದ ಪ್ರಕಾರ, ಬದಲಿ ಆಟಗಾರನ ಆಯ್ಕೆ ಮಾಡುವಾಗ ಮೂಲ ಆಟಗಾರನ ಖರೀದಿ ಬೆಲೆಯನ್ನೇ ನೀಡಬೇಕು. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ನೀಡುವಂತಿಲ್ಲ. ಹರಾಜಿನಲ್ಲಿ ಆ್ಯಡಮ್ ಮಿಲ್ನೆಗೆ 75 ಲಕ್ಷ ರೂಪಾಯಿ ನೀಡಿ ಮುಂಬೈ ಖರೀದಿಸಿತ್ತು. ಮಿಲ್ನೆ ಅಲಭ್ಯರಾದ ಕಾರಣ ಜೊಸೆಫ್‌ಗೆ ಅವಕಾಶ ನೀಡಲಾಯಿತು.  ಹೀಗಾಗಿ ಕೇವಲ 75 ಲಕ್ಷ ರೂಪಾಯಿಗೆ ತಂಡ ಸೇರಿಕೊಂಡ ಜೊಸೆಫ್ ಮೊದಲ ಐಪಿಎಲ್ ಪಂದ್ಯದಲ್ಲೇ 6 ವಿಕೆಟ್ ಕಬಳಿಸಿ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. 

Latest Videos
Follow Us:
Download App:
  • android
  • ios