ಚೆನ್ನೈ(ಮಾ.23): 12ನೇ ಆವೃತ್ತಿ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.  17.1 ಓವರ್‌ಗಳಲ್ಲಿ RCB 70 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ CSK ಗೆಲುವಿಗೆ 71 ರನ್ ಟಾರ್ಗೆಟ್ ನೀಡಿದೆ. ಇದು RCBಯ 2ನೇ ಅತ್ಯಂತ ಕಡಿಮೆ ಮೊತ್ತವಾಗಿದೆ. ಇದಕ್ಕು ಮೊದಲು 2017ರಲ್ಲಿ ಕೆಕೆಆರ್ ವಿರುದ್ಧ 49 ರನ್‌ಗೆ ಆಲೌಟ್ ಆಗಿತ್ತು.

ಇದನ್ನೂ ಓದಿ: IPL 2019: ಚೆನ್ನೈನಲ್ಲಿ RCB ಪ್ರದರ್ಶನ- ಅಭಿಮಾನಿಗಳಿಗೆ ಆತಂಕ!

ಟಾಸ್ ಸೋತು ಬ್ಯಾಟಿಂಗ್ ಇಳಿದ RCB ಆರಂಭದಲ್ಲೇ ಎಡವಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ ಜೋಡಿ ಮೊದಲ ವಿಕೆಟ್‌ಗೆ ಕಲೆಹಾಕಿದ್ದು ಕೇವಲ 16 ರನ್ ಮಾತ್ರ. ಅಷ್ಟರಲ್ಲೇ ಕೊಹ್ಲಿ 6 ರನ್ ಸಿಡಿಸಿ ಪೆಲಿಯನ್ ಸೇರಿದ್ದರು. ಮೊಯಿನ್ ಆಲಿ 9 ರನ್‌ಗೆ ನಿರ್ಗಮಿಸಿದರೆ, ಎಬಿ ಡಿವಿಲಿಯರ್ಸ್ 9 ರನ್‌ಗಳಿಸಿ ಔಟಾದರು. ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಮೋಡಿಗೆ RCB ತತ್ತರಿಸಿತು.

 2013ರ ಬಳಿಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಯರ್ಸ್ ಒಂದೇ ಒಂದು ಬೌಂಡರಿ ಬಾರಿಸಿದರೆ ನಿರ್ಗಮಿಸಿದ ಅಪಖ್ಯಾತಿಗೆ ಗುರಿಯಾದರು. ಶಿಮ್ರೊನ್ ಹೆಟ್ಮೆಯರ್ ಶೂನ್ಯ, ಶಿವಂ ದುಬೆ 2, ಕೊಲಿನ್ ಡಿ ಗ್ರ್ಯಾಂಡ್‌ಹೊಮ್ಮೆ 4, ನವದೀಪ್ ಸೈನಿ 2 ಹಾಗೂ ಯಜುವೇಂದ್ರ ಚಹಾಲ್ 4 ರನ್ ಗಳಿಸಿ ಔಟಾದರು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ IPL ಟೂರ್ನಿ ಪ್ರಸಾರಕ್ಕೆ ನಿರ್ಬಂಧ

ಆರಂಭಿಕ ಪಾರ್ಥೀವ್ ಪಟೇಲ್ ಏಕಾಂಗಿ ಹೋರಾಟ ನೀಡಿದರು. ಪಾರ್ಥೀವ್ ನಾನ್ ಸ್ಟ್ರೈಕ್‌ನಲ್ಲೇ ಉಳಿದುಕೊಂಡರೆ ಇತ್ತ RCBಯ 10 ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಪಾರ್ಥೀವ್ ಪಟೇಲ್ 29 ರನ್ ಸಿಡಿಸಿ ಔಟಾದರು.  ಈ ಮೂಲಕ  RCB ತಂಡ 17.1 ಓವರ್‌ಗಳಲ್ಲಿ 70 ರನ್‌ಗೆ ಆಲೌಟ್ ಆಗಿದೆ.