ಪುಲ್ವಾಮಾ ದಾಳಿ ಬಳಿಕ ಭಾರತ PSL ಟೂರ್ನಿ ಪ್ರಸಾರ ನಿರ್ಬಂಧಿಸಿತ್ತು. ಇದೀಗ ಪಾಕಿಸ್ತಾನ ಭಾರತದ IPL ಟೂರ್ನಿ ಪ್ರಸಾರವನ್ನು ಪಾಕಿಸ್ತಾದಲ್ಲಿ ನಿಷೇಧಿಸಿದೆ. ಇದಕ್ಕೆ ಪಾಕಿಸ್ತಾನ ಹಲವು ಕಾರಣವನ್ನೂ ನೀಡಿದೆ.
ಇಸ್ಲಾಮಾಬಾದ್(ಮಾ.21): ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಸೂಪರ್ ಲೀಗ್(PSL) ಟೂರ್ನಿಯನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಇದೀಗ ಪಾಕಿಸ್ತಾನ ತಿರುಗೇಟು ನೀಡಲು ಮುಂದಾಗಿದೆ. ಭಾರತದ ಐಪಿಎಲ್ ಟೂರ್ನಿ ಪ್ರಸಾರವನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫಾವದ್ ಅಹಮ್ಮದ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಬಿಗ್ ಶಾಕ್ ನೀಡಿದ IMG ರಿಲಯನ್ಸ್!
ಪಾಕಿಸ್ತಾನದಲ್ಲಿ IPL ನಿರ್ಬಂಧಿಸುವುದರಿಂದ ಬಿಸಿಸಿಐಗೆ ನಷ್ಟವಾಗಲಿದೆ. ನಾವು ಕ್ರಿಕೆಟ್ ಸೂಪರ್ ಪವರ್ ರಾಷ್ಟ್ರ. ನಾವು ರಾಜಕೀಯ ಮತ್ತು ಕ್ರೀಡೆಯನ್ನು ಬೆರೆಸಲ್ಲ. ಆದರೆ ಬಿಸಿಸಿಐ ಈಗಾಗಲೇ ಸೇನೆ ಕ್ಯಾಪ್ ಧರಿಸಿ ಆಸಿಸ್ ವಿರುದ್ದ ಏಕದಿನ ಪಂದ್ಯ ಆಡಿದೆ. ಈ ಮೂಲಕ ನಿಯಮ ಉಲ್ಲಂಘಿಸಿದೆ. ಇದೀಗ ನಮ್ಮ ಸರದಿ ನಾವು IPL ಟೂರ್ನಿ ನಿಷೇಧಿಸಿ ತಕ್ಕ ಪಾಠ ಕಲಿಸುತ್ತೇವೆ ಎಂದು ಫಾವದ್ ಹೇಳಿದ್ದಾರೆ.
ಇದನ್ನೂ ಓದಿ: ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!
ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ PSL ಟೂರ್ನಿ ಪ್ರಸಾರಕ್ಕೆ ನಿರ್ಬಂಧಿಸಲಾಯಿತು. ಇಷ್ಟೇ ಅಲ್ಲ ಟೂರ್ನಿಯ ಪ್ರೊಡಕ್ಷನ್‌ನಿಂದ IMG ರಿಲಾಯನ್ಸ್ ಸಂಸ್ಥೆ ಹೊರಬಂದಿತ್ತು. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಲ್ಲದೆ, ದಿಢೀರ್ ಬೇರೆ ಬ್ರಾಡ್‌ಕಾಸ್ಟರ್ ಹುಡುಬೇಕಾಯ್ತು. ಇದೀಗ ಪಾಕಿಸ್ತಾನದಲ್ಲಿ IPL ಟೂರ್ನಿ ನಿರ್ಬಂಧಿಸಿರುವುದರಿಂದ ಬಿಸಿಸಿಐ ಅಥವಾ ಭಾರತೀಯ ಕ್ರಿಕೆಟ್‌ಗೆ ಯಾವುದೇ ನಷ್ಟವಿಲ್ಲ. ಇಷ್ಟಾದರೂ ಪಾಕಿಸ್ತಾನ ಮೊಂಡುತನ ಬಿಟ್ಟಿಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 22, 2019, 5:43 PM IST