ಮುಂಬೈ(ಏ.15): ಎಬಿ ಡಿವಿಲಿಯರ್ಸ್ ಹಾಗೂ ಮೊಯಿನ್ ಆಲಿ ಹೋರಾಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ 8ನೇ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಡಿದ RCB 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿದೆ. ಇದೀಗ ಮುಂಬೈ ಗೆಲುವಿಗೆ 172 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ RCB ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಕೊಹ್ಲಿ ಕೇವಲ 8 ರನ್ ಸಿಡಿಸಿ ಔಟಾದರು. ಪಾರ್ಥೀವ್ ಪಟೇಲ್ 28 ರನ್ ಕಾಣಿಕೆ ನೀಡಿದರು. ಆರಂಭಿಕರ ವಿಕೆಟ್ ಪತನದ ನಂತರ ಎಬಿ ಡಿವಿಲಿಯರ್ಸ್ ಹಾಗೂ ಮೊಯಿನ್ ಆಲಿ ಜೊತೆಯಾಟ ನೀಡಿದರು.

ಅಬ್ಬರಿಸಿದ ಎಬಿಡಿ ಹಾಗೂ ಮೊಯಿನ್ ಆಲಿ ತಲಾ ಅರ್ಧಶತಕ ಸಿಡಿಸಿ ಆಸರೆಯಾದರು. ಮೊಯಿನ್ ಆಲಿ 50 ರನ್ ಸಿಡಿಸಿ ಔಟಾದರು. ಇನ್ನು ಮಾರ್ಕಸ್ ಸ್ಟೊಯ್ನಿಸ್ ಡಕೌಟ್ ಆದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಬಿ ಡಿವಿಲಿಯರ್ಸ್  50 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 75 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 

ಅಂತಿಮ ಓವರ್‌ನಲ್ಲಿ RCB ರನ್‌ಗಿಂತ ಹೆಚ್ಚು ವಿಕೆಟ್ ಕಳೆದುಕೊಂಡಿತು. ಅಕ್ಷದೀಪ್ ನಾಥ್, ಪವನ್ ನೇಗಿ ರನ್‌ಗಳಿಸದೇ ಔಟಾದರು.   RCB 7 ವಿಕೆಟ್ ನಷ್ಟಕ್ಕೆ 171  ರನ್ ಸಿಡಿಸಿತು. ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಮುಂಬೈ ವೇಗಿ ಲಸಿತ್ ಮಾಲಿಂಗ 4 ವಿಕೆಟ್ ಕಬಳಿಸಿದರು.