ಚೆನ್ನೈ(ಮಾ.31): ಆರಂಭಿಕ 2 ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಹ್ಯಾಟ್ರಿಕ್ ಗೆಲುವನ್ನು ಎದುರುನೋಡುತ್ತಿದೆ. CSK ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಟಾಸ್ ಪ್ರಕ್ರಿಯೆ ಮುಗಿದಿದೆ.  CSK ವಿರುದ್ಧ ಟಾಸ್ ಗೆದ್ದಿರುವ  ರಾಜಸ್ಥಾನ ರಾಯಲ್ಸ್  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

 

 

ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಆರಂಭಿಕ 2 ಪಂದ್ಯಗಳನ್ನು ರಾಜಸ್ಥಾನ ರಾಯಲ್ಸ್  ಕೈಚೆಲ್ಲಿತು. ಇತ್ತ CSK ಗೆಲುವಿನ ನಾಗಾಲೋಟದಲ್ಲಿದೆ. ಎಂ.ಎಸ್.ಧೋನಿ ನಾಯಕತ್ವದ CSK, ಇದೀಗ 3ನೇ ಗೆಲುವಿಗಾಗಿ ಕಣಕ್ಕಿಳಿದಿದೆ.