ಜೈಪುರ(ಮಾ.25): ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಲೀಗ್ ಪಂದ್ಯ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಟಿ20 ಸ್ಪೆಷಲಿಸ್ಟ್  ಕ್ರಿಸ್ ಗೇಲ್ ಹಾಗೂ ಸರ್ಫರಾಜ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಕಿಂಗ್ಸ್ ಇಲೆವೆನ್ ಪಂಜಾಬ್, ಎದುರಾಳಿ ರಾಜಸ್ಥಾನ ರಾಯಲ್ಸ್ ವಿರುದ್ದ 184 ರನ್ ಸಿಡಿಸಿದೆ. ಈ ಮೂಲಕ ರಾಜಸ್ಥಾನ ಗೆಲುವಿಗೆ 185 ರನ್ ಟಾರ್ಗೆಟ್ ನೀಡಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ KXP ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕನ್ನಡಿಗ ಕೆಎಲ್ ರಾಹುಲ್ ಕೇವಲ 4 ರನ್  ಸಿಡಿಸಿ ಔಟಾದರು. ಆದರೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಏಕಾಂಗಿ ಹೋರಾಟ ನೀಡಿದರು. ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ 22 ರನ್  ಸಿಡಿಸಿ ಪೆವಿಲಿಯನ್ ಸೇರಿದರು.

12ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೇಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. 47 ಎಸೆತದಲ್ಲಿ 8 ಬೌಂಡರಿ, 4 ಸಿಕ್ಸರ್ ಮೂಲಕ 79 ರನ್ ಸಿಡಿಸಿ ಔಟಾದರು. ಸರ್ಫರಾಜ್ ಖಾನ್ ಹಾಗೂ ನಿಕೋಲಸ್ ಪೂರನ್ ಜೊತೆಯಾಟದಿಂದ ಪಂಜಾಬ್ ಮತ್ತೆ ಚೇತರಿಸಿಕೊಂಡಿತು. ಆದರೆ ಪೂರನ್ 15 ರನ್ ಸಿಡಿಸಿ ಔಟಾದರು. ಸರ್ಫರಾಜ್ 29 ಎಸೆತದಲ್ಲಿ 46 ರನ್ ಚಚ್ಚಿದರು. ಈ ಮೂಲಕ ಪಂಜಾಬ್ 4 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.