ಮುಂಬೈ(ಮೇ.05): ಮುಂಬೈ ಇಂಡಿಯನ್ಸ್‌ಗೆ ಅಗ್ರಸ್ಥಾನಕ್ಕೇರುವ ತವಕ ಇತ್ತ ಕೋಲ್ಕತಾ ನೈಟ್ ರೈಡರ್ಸ್‌ಗೆ ಪ್ಲೇ ಆಫ್ ಪ್ರವೇಶಿಸೋ ಅವಕಾಶ. ಈ ಪಂದ್ಯದ ಫಲಿತಾಂಶದ ಮೇಲೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್ ನಿರ್ಧಾರವಾಗಲಿದೆ. ಹೀಗಾಗಿಯೇ ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಟಾಸ್ ಗೆದ್ದಿರುವ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿದೆ. ಮುಂಬೈ ತಂಡದಲ್ಲಿ 2 ಬದಲಾವಣೆ ಮಾಡಿದ್ದರೆ, ಕೆಕೆಆರ್ ಒಂದು ಬದಲಾವಣೆ ಮಾಡಿದೆ.ಇವಿನ್ ಲಿವಿಸ್ ಬದಲು ಮಿಚೆಲ್ ಮೆಕ್ಲೆನಾಘನ್ ತಂಡ ಸೇರಿಕೊಂಡಿದ್ದರೆ, ಬರಿಂದರ್ ಸ್ರಾನ್ ಬದಲು ಇಶಾನ್ ಕಿಶನ್ ಅವಕಾಶ ಪಡೆದಿದ್ದಾರೆ. ಇತ್ತ ಕೆಕೆಆರ್ ಪಿಯೂಷ್ ಚಾವ್ಲಾ ಬದಲು ಪ್ರಸಿದ್ಧ ಕೃಷ್ಣಗೆ ಅಕಾಶ ನೀಡಲಾಗಿದೆ.

 

 

12ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ಇದಾಗಿದ್ದು, ಮೇ. 7 ರಿಂದ ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಮುಂಬೈ ಇಂಡಿಯನ್ಸ್ 13 ಪಂದ್ಯದಲ್ಲಿ 8 ಗೆಲುವು ಹಾಗೂ 5 ಸೋಲಿನೊಂದಿಗೆ 16 ಅಂಕ ಸಂಪಾದಿಸಿದೆ. ಇತ್ತ ಕೆಕೆಆರ್ 6 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿದೆ.