ಕೋಲ್ಕತಾ(ಏ.28): ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರಿಸಲು ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

 

ಆರಂಭದಲ್ಲಿ 4 ಪಂದ್ಯ ಗೆದ್ದು ಬೀಗಿದ್ದ ಕೆಕೆಆರ್ ಬಳಿಕ ಸತತ 6 ಸೋಲು ಕಂಡಿದೆ. ಒಟ್ಟು 7 ಸೋಲಿನೊಂದಿಗೆ ಕೋಲ್ಕತಾ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 11 ಪಂದ್ಯದಲ್ಲಿ 7 ಗೆಲುವು 4 ಸೋಲಿನ ಮೂಲಕ 2ನೇ ಸ್ಥಾನದಲ್ಲಿದೆ.