ಮೊಹಾಲಿ(ಮಾ.30): ಕಿಂಗ್ಸ್ ಇಲೆವೆನ್ ಪಂಜಾಬ್  ತಂಡದ ಅದ್ಬುತ ಬೌಲಿಂಗ್ ದಾಳಿ ನಡುವೆಯೂ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳು ದಿಟ್ಟ ಹೋರಾಟ ನೀಡಿದ್ದಾರೆ. ಕ್ವಿಂಟನ್ ಡಿಕಾಕ್ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ. ಈ ಮೂಲಕ ಪಂಜಾಬ್ ಗೆಲುವಿಗೆ 177 ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: 2ನೇ ಆವೃತ್ತಿ IPLಗೆ ಅಂಟಿಕೊಂಡಿತು ವಿವಾದ- BCCIಗೆ ಶುರುವಾಯ್ತು ತಲೆನೋವು!

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 51 ರನ್ ಜೊತೆಯಾಟ ನೀಡಿದರು. ಆದರೆ ರೋಹಿತ್ 19 ಎಸೆತದಲ್ಲಿ 5 ಬೌಂಡರಿ ನೆರವಿನಿಂದ 32 ರನ್ ಸಿಡಿಸಿ ಔಟಾದರು. ಇತ್ತ ಡಿಕಾಕ್ ಅರ್ಧಶತಕ ಸಿಡಿಸಿ ಆಸರೆಯಾದರು. 

ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಶಾಕ್!

ಸೂರ್ಯಕುಮಾರ್ ಯಾದವ್ ಹಾಗೂ ಯುವರಾಜ್ ಸಿಂಗ್ ಅಬ್ಬರಿಸಲಿಲ್ಲ. ಕೀರನ್ ಪೊಲಾರ್ಡ್ ಸತತ ವೈಫಲ್ಯ ಅನುಭವಿಸಿದರು. ಕ್ರುನಾಲ್ ಪಾಂಡ್ಯ ಆಟ 10 ರನ್‌ಗಳಿಗೆ ಅಂತ್ಯವಾಯಿತು. ಆದರೆ ಹಾರ್ದಿಕ್ ಪಾಂಡ್ಯ ಅಬ್ಬರ ಮುಂಬೈಗೆ ನೆರವಾಯಿತು. ಹಾರ್ದಿಕ್ ಪಾಂಡ್ಯ 19 ಎಸೆತದಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ.