ಚೆನ್ನೈ(ಏ.26): ಚೆನ್ನೈ ಸೂಪರ್ ಕಿಂಗ್ಸ್ ಅದ್ಬುತ ಬೌಲಿಂಗ್ ದಾಳಿ ನಡುವೆಯೂ ನಾಯಕ ರೋಹಿತ್ ಶರ್ಮಾ ಹೋರಾಟ ನೀಡಿದ್ದಾರೆ. ಮುಂಬೈಕರ್ ಸಿಡಿಸಿದ 67 ರನ್ ನೆರವಿನಿಂದ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ155ರನ್ ಸಿಡಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ 156 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕ್ವಿಂಟನ್ ಡಿಕಾಕ್ 15 ರನ್ ಸಿಡಿಸಿ ಔಟಾದರು. ಆದರೆ ನಾಯಕ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವಿನ್ ಲಿವಿಸ್ ಕೂಡ ಉತ್ತಮ ಸಾಥ್ ನೀಡಿದರು. ಆದರೆ ಲಿವಿಸ್ 32 ರನ್ ಸಿಡಿಸಿ ಔಟಾದರು.

ಕ್ರುನಾಲ್ ಪಾಂಡ್ಯ 1 ರನ್‌ಗೆ ಸುಸ್ತಾದರು. ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಆಸರೆಯಾದರು. ಆದರೆ ರೋಹಿತ್ 48 ಎಸೆತದಲ್ಲಿ 67 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಅಜೇಯ 23 ರನ್ ಹಾಗೂ ಕೀರನ್ ಪೊಲಾರ್ಡ್  ಅಜೇಯ 13 ರನ್ ಸಿಡಿಸಿದರು ಈ ಮೂಲಕ ಮುಂಬೈ 4 ವಿಕೆಟ್ ನಷ್ಟಕ್ಕೆ155  ರನ್ ಸಿಡಿಸಿತು.