ಬೆಂಗಳೂರು(ಮಾ.28): ಬೆಂಗಳೂರಿನಲ್ಲಿ ನಡೆಯುತ್ತಿರುವ RCB ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. 14ನೇ ಓವರ್‌ನಲ್ಲಿ ಯಜುವೇಂದ್ರ ಚೆಹಾಲ್‌ನ ಆರಂಭಿಕ 3 ಎಸೆತಗಳನ್ನ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಮತ್ತೆ 6 ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸೋ ಸೂಚನೆ ನೀಡಿದ್ದರು.

ಇದನ್ನೂ ಓದಿ: ಚುನಾವಣಾ ತಯಾರಿ ನಡುವೆ RCB ಪಂದ್ಯಕ್ಕೆ ಹಾಜರಾದ ಸಿದ್ದರಾಮಯ್ಯ!

4ನೇ ಎಸೆತದಲ್ಲೂ ಸಿಕ್ಸರ್ ಸಿಡಿಸಿಲು ಹೋದ ಯುವರಾಜ್ ಸಿಂಗ್ ಬೌಂಡರಿ ಗೆರೆ ಬಳಿ ಕ್ಯಾಚ್ ನೀಡಿದರು. ಈ ಮೂಲಕ ಯುವರಾಜ್ 12 ಎಸೆತದಲ್ಲಿ23 ರನ್ ಸಿಡಿಸಿ ಔಟಾದರು. ಆದರೆ ಯುವಿ 3 ಸಿಕ್ಸರ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣದ ಅಭಿಮಾನಿಗಳು ಸಂಭ್ರಮಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಪೀಟರ್ಸನ್!

ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ 35 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್ ಮೂಲಕ 53 ರನ್ ಸಿಡಿಸಿದ್ದರು. ಈ ಮೂಲಕ ಏಕಾಂಗಿ ಹೋರಾಟ ನೀಡಿದ್ದರು. ಇದೀಗ 2ನೇ ಪಂದ್ಯದಲ್ಲಿ ಯುವಿ ಅಬ್ಬರಿಸಿದ್ದಾರೆ. ಈ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.