ಬೆಂಗಳೂರು(ಮಾ.28): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರಂಭಿಕ ಹಂತದಲ್ಲಿ ಅಬ್ಬರಿಸಿ ಬಳಿಕ ದಿಢೀರ್ ವಿಕೆಟ್ ಪನತಕ್ಕೆ ಗುರಿಯಾದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿದೆ. ಈ ಮೂಲಕ RCB ಗೆಲುವಿಗೆ 188 ರನ್ ಟಾರ್ಗೆಟ್ ನೀಡಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ 54 ರನ್ ಜೊತೆಯಾಟ ನೀಡಿದರು. ಡಿಕಾಕ್ 23 ರನ್ ಸಿಡಿಸಿ ಔಟಾದರು. ಆದರೆ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶದ ಮೂಲಕ 33 ಎಸೆತದಲ್ಲಿ 48 ರನ್ ಸಿಡಿಸಿದರು.

ಇದನ್ನೂ ಓದಿ: ಚುನಾವಣಾ ತಯಾರಿ ನಡುವೆ RCB ಪಂದ್ಯಕ್ಕೆ ಹಾಜರಾದ ಸಿದ್ದರಾಮಯ್ಯ!

ಹ್ಯಾಟ್ರಿಕ್ ಸಿಕ್ಸರ್ ಮೂಲಕ ಅಬ್ಬರಿಸಿದ ಯುವರಾಜ್ ಸಿಂಗ್ 23 ರನ್ ಸಿಡಿಸಿ ಔಟಾದರು. ಆಸರೆಯಾಗಿದ್ದ ಸೂರ್ಯಕುಮಾರ್ ಯಾದವ್ 38 ರನ್ ಸಿಡಿಸಿ ಔಟಾದರು. ಬೃಹತ್ ಮೊತ್ತದ ಸೂಚನೆ ನೀಡಿದ್ದ ಮುಂಬೈ, ಯಜುವೇಂದ್ರ ಚಹಾಲ್ ದಾಳಿಗೆ ತತ್ತರಿಸಿ,ದಿಢೀರ್ ಕುಸಿತ ಕಂಡಿತು.

ಇದನ್ನೂ ಓದಿ: IPL 2019: ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಯುವರಾಜ್ ಸಿಂಗ್!

ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ ಹಾಗೂ ಮೆಚೆಲ್ ಮೆಕ್ಲೆನಾಘನ್ ಅಬ್ಬರಿಸಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈಗೆ ಚೇತರಿಕೆ ನೀಡಿದರು. 14 ಎಸೆತಗದಲ್ಲಿ ಹಾರ್ದಿಕ್ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 32 ರನ್ ಚಚ್ಚಿದರು. ಇದರೊಂದಿಗೆ ಮುಂಬೈ 8 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿತು. RCB ಗೆಲುವಿಗೆ ತವರಿನಲ್ಲಿ 188 ರನ್ ಅವಶ್ಯಕತೆ ಇದೆ.