ಮೊಹಾಲಿ(ಏ.01): ಕಿಂಗ್ಸ್ ಇಲೆವೆನ್ ಅದ್ಬುತ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಲೆಬಾಗಿದೆ.  ಪಂಜಾಬ್ ವಿರುದ್ಧ ನಡೆದ ಐಪಿಎಲ್ 13ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೊಲೊಪ್ಪಿಕೊಂಡಿದೆ. ಗೆಲುವಿಗೆ 167 ರನ್ ಟಾರ್ಗೆಟ್ ಪಡೆದಿದ್ದ ಡೆಲ್ಲಿ 19.2 ಓವರ್‌ನಲ್ಲಿ 152ರನ್‌ಗೆ ಆಲೌಟ್ ಆಯಿತು. ತವರಿನ ಅಭಿಮಾನಿಗಳ ಮುಂದೆ ಅದ್ಬುತ ಪ್ರದರ್ಶನ ನೀಡಿದ ಪಂಜಾಬ್ 14 ರನ್‌ಗಳ ಗೆಲುವು ಸಾಧಿಸಿತು.

ಡೆಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನದ ನಡುವೆಯೂ ಪಂಜಾಬ್ 167 ರನ್ ಟಾರ್ಗೆಟ್ ನೀಡಿತು. ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಶಾ ಶೂನ್ಯಕ್ಕೆ ಔಟಾದರು. ನಾಯಕ ಶ್ರೇಯಸ್ ಅಯ್ಯರ್ 28 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಶಿಖರ್ ಧವನ್ 30 ರನ್ ಕಾಣಿಕೆ ನೀಡಿದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಷಬ್ ಪಂತ್ 26 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು. ಕೊಲಿನ್ ಇನ್‌ಗ್ರಾಂ ಹೋರಾಟ ಮುಂದುವರಿಸಿದರೆ, ಇತ್ತ ಕ್ರಿಸ್ ಮೊರಿಸ್ ರನೌಟ್‌ಗೆ ಬಲಿಯಾದರು. ಅಂತಿಮ ಹಂತದಲ್ಲಿ ಇನ್‌ಗ್ರಾಂ ವಿಕೆಟ್ ಪತನಗೊಂಡಿತು. ಇನ್‌ಗ್ರಾಂ38 ರನ್ ಸಿಡಿಸಿ ಔಟಾಗುತ್ತಿದ್ದಂತೆ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು.

ಅಂತಿಮ ಓವರ್‌ನಲ್ಲಿ  , ಕಾಗಿಸೋ ರಬಾಡ ಹಾಗೂಸಂದೀಪ್ ಲಿಮ್ಚಾನೆ ವಿಕೆಟ್ ಕಬಳಿಸಿದ ಸ್ಯಾಮ್ ಕುರ್ರನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರು. ಇದಕ್ಕೊ ಮೊದಲು ಓವರ್‌ ಮಾಡಿದ್ದ  ಕುರ್ರನ್, ಹರ್ಷಲ್ ವಿಕೆಟ್ ಕಬಳಿಸಿದ್ದರು. ಇದು 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಹ್ಯಾಟ್ರಿಕ್ ವಿಕೆಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಈ ಮೂಲಕ ಪಂಜಾಬ್ ತಂಡ 14 ರನ್ ಗೆಲುವು ಸಾಧಿಸಿತು. ಆದರೆ ಡೆಲ್ಲಿ ಗೆಲುವಿನ ಸನಿಹದಲ್ಲಿ ಎಡವಿತು.