ಕೋಲ್ಕತಾ(ಮಾ.24): ಐಪಿಎಲ್ 12ನೇ ಆವೃತ್ತಿ 2ನೇ ದಿನ 2 ಪಂದ್ಯಗಳು ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಎದುರಿಸಲಿದೆ. ಈಗಾಗಲೇ ಟಾಸ್ ಪ್ರಕ್ರಿಯೆ ಮುಗಿದಿದ್ದು, KKR ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್’ಗಿಂದು ಬಲಿಷ್ಠ ಮುಂಬೈ ಇಂಡಿಯನ್ಸ್ ಸವಾಲು..!

ಕಳೆದ ಆವೃತ್ತಿಯಲ್ಲಿ KKR ಹಾಗೂ SRH ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತ್ತು. ಈ ಬಾರಿಯೂ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದೆ.   ರೈಸರ್ಸ್ ತಂಡದ ಸ್ಟಾರ್ ಆಟಗಾರರಿಗೆ ಇಂಜುರಿ ಸಮಸ್ಯೆ ಕಾಡುತ್ತಿದೆ. ಕೇನ್ ವಿಲಿಯಮ್ಸನ್ ಬದಲು ಭುವನೇಶ್ವರ್ ಕುಮಾರ್ SRH ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.  ಇತ್ತ ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ 2ನೇ ಬಾರಿಗೆ ಕಣಕ್ಕಿಳಿಯುತ್ತಿರುವ ಕೆಕೆಆರ್ ಶುಭಾರಂಭದ ವಿಶ್ವಾಸದಲ್ಲಿದೆ.