ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ KKR ಘರ್ಜಸಿದೆ. ಮತ್ತೆ ರಸೆಲ್ ಮೇನಿಯಾ ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಈಡನ್ ಗಾರ್ಡನ್ಸ್ ಮೈದಾದಲ್ಲಿ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂಗ ಕೋಲ್ಕತಾ 178 ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್  

ಕೋಲ್ಕತಾ(ಏ.12): ಶುಭ್‌ಮಾನ್ ಗಿಲ್ ಅರ್ಧಶತಕ ಹಾಗೂ ಹಾಗೂ ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ 26ನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿದೆ. ಇದೀಗ ಡೆಲ್ಲಿ ಗೆಲುವಿಗೆ 179 ರನ್ ಸಿಡಿಸಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಸೋತು ಬ್ಯಾಟಿಂಗ್ ಇಳಿದ KKR ತಂಡಕ್ಕೆ ಆರಂಭದಲ್ಲೇ ಡೆಲ್ಲಿ ವೇಗಿ ಇಶಾಂತ್ ಶರ್ಮಾ ಶಾಕ್ ನೀಡಿದರು. ಜೋ ಡೆನ್ಲಿ ಡಕೌಟ್ ಆದರು. ಶುಭಮಾನ್ ಗಿಲ್ ಹೋರಾಟ ಮುಂದುವರಿಸಿದರು. ಇತ್ತ ರಾಬಿನ್ ಉತ್ತಪ್ಪ 28 ರನ್ ಕಾಣಿಕೆ ನೀಡಿದರು. ಆದರೆ ನಿತೀಶ್ ರಾಣಾ ಹಾಗೂ ನಾಯಕ ದಿನೇಶ್ ಕಾರ್ತಿಕ್ ಅಬ್ಬರಿಸಲಿಲ್ಲ.

ಹೋರಾಟ ನೀಡಿದ ಶುಭಮಾನ್ ಆಕರ್ಷಕ ಅರ್ಧಶತಕ ಸಿಡಿಸಿ ಚೇತರಿಕೆ ನೀಡಿದರು. ಶುಭಮಾನ್ 65 ರನ್ ಸಿಡಿಸಿ ಔಟಾದರು. ಶುಭಮಾನ್ ವಿಕೆಟ್ ಪತನದ ನಂತರ ಆ್ಯಂಡ್ರೆ ರಸೆಲ್ ಅಬ್ಬರ ಆರಂಭಗೊಂಡಿತು. ಭಾರತ ಅತೀ ದೊಡ್ಡ ಮೈದಾನ ಈಡನ್‌ ಗಾರ್ಡ್ಸನ್ಸ್‌ನಲ್ಲಿ ರಸೆಲ್ ಸಿಕ್ಸರ್ ಮಳೆ ಸುರಿಸಿದರು.

ರಸೆಲ್ 21 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 45 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಪಿಯೂಷ್ ಚಾವ್ಲಾ ಅಜೇಯ 14 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿತು. ಡೆಲ್ಲಿ ಪರ ಕ್ರಿಸ್ ಮೊರಿಸ್, ಕಾಗಿಸೋ ರಬಾಡ ಹಾಗೂ ಕೀಮೋ ಪೌಲ್ ತಲಾ 2 ವಿಕೆಟ್ ಕಬಳಿಸಿದರು.