ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮೆಂಟರ್ ಆಗ್ತಾರಾ ಅನಿಲ್ ಕುಂಬ್ಳೆ?

https://static.asianetnews.com/images/authors/dfaa24eb-ede5-5577-a696-88ef5a369928.jpg
First Published 6, Sep 2018, 3:27 PM IST
IPL 2019 Delhi daredevils trying to rope Anil Kumble
Highlights

2019ರ ಐಪಿಎಲ್ ಟೂರ್ನಿಗೆ ತಂಡಗಳು ಸಿದ್ದತೆ ಆರಂಭಿಸಿದೆ. ಇದೀಗ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನ ತಂಡಕ್ಕೆ ಸೇರಿಸಿಕೊಳ್ಳಲು ಮಾತುಕತೆ ನಡೆಸಿದೆ. ಇಲ್ಲಿದೆ ಡೆಲ್ಲಿ ತಂಡದ ಕೋಚಿಂಗ್ ಸ್ಟಾಫ್ ವಿವರ.

ದೆಹಲಿ(ಸೆ.06): ಐಪಿಎಲ್ ಟೂರ್ನಿಯ ಕಳೆದ 11 ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಕನಿಷ್ಠ ಹೋರಾಟ ನೀಡಿಲ್ಲ. ಪ್ರತಿ ಟೂರ್ನಿಯಲ್ಲಿ ಡೆಲ್ಲಿ ತಂಡದ ಕತೆ ಶೋಚನೀಯ. ಇದೀಗ 12ನೇ ಆವೃತ್ತಿಯಲ್ಲಿ ಡೆಲ್ಲಿ ತಂಡ ಮಹತ್ತರ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.

ಡೆಲ್ಲಿ ತಂಡ ಈಗಾಗಲೇ ಕೋಚ್ ಸ್ಥಾನಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಆಯ್ಕೆ ಮಾಡಲಾಗಿದೆ. ಇದೀಗ ತಂಡದ ಮೆಂಟರ್ ಆಗಿ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ನೇಮಕ ಮಾಡಲು ಮಾತುಕತೆ ನಡೆಸಲಾಗಿದೆ.

ಮೆಂಟರ್ ಸ್ಥಾನಕ್ಕೆ ಕುಂಬ್ಳೆ ಮನಒಲಿಸಲು ಈಗಾಗಲೇ ಮಾತುಕತೆ ನಡೆಸಲಾಗಿದೆ ಅನ್ನೋದನ್ನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಫ್ರಾಂಚೈಸಿ ಮಾಲೀಕರಲ್ಲೊಬ್ಬರಾದ ಪರ್ತ್ ಜಿಂದಾಲ್ ಹೇಳಿದ್ದಾರೆ. ಆದರೆ ಇನ್ನು ಅಂತಿಮವಾಗಿಲ್ಲ ಎಂದಿದ್ದಾರೆ.

2015ರಲ್ಲಿ ರಿಕಿ ಪಾಂಟಿಂಗ್ ಹಾಗೂ ಅನಿಲ್ ಕುಂಬ್ಳೆ ಮುಂಬೈ ತಂಡದ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಇವಿಬ್ಬರ ಜೋಡಿಯನ್ನ ಮತ್ತೆ ಒಂದೂಗೂಡಿಸಿ ಪ್ರಶಸ್ತಿ ಗೆಲುವಿಗೆ ಡೆಲ್ಲಿ ತಂಡ ಕಸರತ್ತು ನಡೆಸುತ್ತಿದೆ.

 

 

loader