ಹೈದರಾಬಾದ್(ಏ.17): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲು ಸಜ್ಜಾಗಿರುವ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೋರಾಟ ನಡೆಸಲಿದೆ. ಈಗಾಗಲೇ ಟಾಸ್ ಗೆದ್ದಿರುವ CSK ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕ ಎಂ.ಎಸ್. ಧೋನಿಗೆ ರೆಸ್ಟ್ ನೀಡಲಾಗಿದೆ. ಹೀಗಾಗಿ ಸುರೇಶ್ ರೈನಾ ತಂಡವನ್ನು ಮುನ್ನಡೆಸಲಿದ್ದಾರೆ.

 

 

CSK ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಎಂ.ಎಸ್.ಧೋನಿ ಬದಲು ಸ್ಯಾಮ್ ಬಿಲ್ಲಿಂಗ್ಸ್ ತಂಡ ಸೇರಿಕೊಂಡಿದ್ದರೆ, ಮಿಚಲ್ ಸ್ಯಾಂಟ್ನರ್ ಬದಲು ಕರಣ್ ಶರ್ಮಾ ತಂಡಕ್ಕೆ ಆಗಮಿಸಿದ್ದಾರೆ. ಇತ್ತ ಹೈದರಾಬಾದ್ ತಂಡದಲ್ಲೂ 2 ಬದಲಾವಣೆ ಮಾಡಲಾಗಿದೆ. ರಿಕಿ ಬುಕಿ ಹಾಗೂ ಅಭಿಷೇಕ್ ಶರ್ಮಾ ತಂಡದಿಂದ ಹೊರಗುಳಿದಿದ್ದಾರೆ. ಇವರ ಬದಲು ಯುಸೂಫ್ ಪಠಾಣ್ ಹಾಗೂ ಶಹಭಾಸ್ ನದೀಮ್ ತಂಡ ಸೇರಿಕೊಂಡಿದ್ದಾರೆ.