ಚೆನ್ನೈ(ಮಾ.23): 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯದ ಟಾಸ್ ಪ್ರಕಿಯೆ ಮುಕ್ತಾಯಗೊಂಡಿದೆ. ಟಾಸ್ ಗೆದ್ದ CSK ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.  2019ರ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಲು RCB ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ.

ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

 

 

2014ರ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ RCB ಗೆಲುವು ಸಾಧಿಸಿಲ್ಲ. ಇದೀಗ ಈ ಸಂಪ್ರದಾಯ ಮುರಿಯಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗಿದೆ. ಇತ್ತ ಧೋನಿ ನಾಯಕತ್ವದ ಹಾಲಿ ಚಾಂಪಿಯನ್ CSK ತವರಿನ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್ ನೀಡಲು ಸಜ್ಜಾಗಿದೆ.

 

 

ಇದನ್ನೂ ಓದಿ: ಐಪಿಎಲ್ 2019: ಲೀಗ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ಈ ಹಣವನ್ನು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟಂಬಕ್ಕೆ ನೀಡಲಾಗಿದೆ. ಹೀಗಾಗಿ ನೇರವಾಗಿ ಪಂದ್ಯ ಆರಂಭಗೊಂಡಿದೆ.