ಚೆನ್ನೈ(ಏ.26): ಐಪಿಎಲ್ ಟೂರ್ನಿಯಲ್ಲಿಂದು ಚಾಂಪಿಯನ್ನರ ಹೋರಾಟ.  ಮೂರು ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ CSK ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದಿನ ಪಂದ್ಯದಲ್ಲಿ ಎಂ.ಎಸ್.ಧೋನಿ ಬದಲು ಸುರೇಶ್ ರೈನಾ CSK ತಂಡವನ್ನು ಮುನ್ನಡೆಸುತ್ತಿದ್ದಾರೆ. CSK ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ.ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದ್ದು, ಮುರಳಿ ವಿಜಯ್ ತಂಡ ಸೇರಿಕೊಂಡಿದ್ದಾರೆ.ಮುಂಬೈ ಇಂಡಿಯನ್ಸ್ ತಂಡದಲ್ಲೂ 2 ಬದಲಾವಣೆ ಮಾಡಲಾಗಿದೆ. 

 

 

ಚೆನ್ನೈ ಸೂಪರ್ ಕಿಂಗ್ಸ್ ಆಡಿದ 11 ಪಂದ್ಯದಲ್ಲಿ 8 ರಲ್ಲಿ ಗೆಲವು ಹಾಗೂ 3 ರಲ್ಲಿ ಸೋಲು ಕಂಡಿದೆ. ಈ ಮೂಲಕ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 10ರಲ್ಲಿ 6 ಗೆಲುವು ಹಾಗೂ 4 ಸೋಲು ಅನುಭವಿಸೋ ಮೂಲಕ 3ನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಮುಂಬೈನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ 37 ರನ್‌ಗಳಿಂದ ಚೆನ್ನೈ ತಂಡವನ್ನು ಮಣಿಸಿತ್ತು.