ಎಂ.ಎಸ್.ಧೋನಿ ಹಾಗೂ ಅಂಬಾಟಿ ರಾಯುಡು ಅಂತಿಮ ಹಂತದಲ್ಲಿ ಅಬ್ಬರಿಸೋ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವದನ್ನು ತಪ್ಪಿಸಿದ್ದಾರೆ. ಪಂಜಾಬ್ ವಿರುದ್ದ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ಚೆನ್ನೈ 160 ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಚೆನ್ನೈ(ಏ.06): ಕಿಂಗ್ಸ್ ಇಲೆವೆನ್ ವಿರುದ್ಧ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಅಂತಿಮ ಹಂತದಲ್ಲಿ ಅಬ್ಬರಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಪಂಜಾಬ್ ನಾಯಕ ಆರ್ ಅಶ್ವಿನ್ ಸ್ಪಿನ್ ಮೋಡಿ ಮೂಲಕ CSK ಅಬ್ಬರಕ್ಕೆ ಬ್ರೇಕ್ ಹಾಕಿದ್ದರು. ಹೀಗಾಗಿ ಚೆನ್ನೈ 3 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿದೆ. ಈ ಮೂಲಕ ಪಂಜಾಬ್ ತಂಡಕ್ಕೆ ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ CSKಗೆ ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 56 ರನ್ ಜೊತೆಯಾಟ ನೀಡಿದರು. ವ್ಯಾಟ್ಸನ್ 26 ರನ್ ಸಿಡಿಸಿ ಔಟಾದರು. 12ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಡುಪ್ಲೆಸಿಸ್ ಅರ್ಧಶತಕ ಸಿಡಿಸಿ ಆಸರೆಯಾದರು. ಡುಪ್ಲೆಸಿಸ್ 38 ಎಸೆತದಲ್ಲಿ 54 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 

ಸುರೇಶ್ ರೈನಾ ಕೇವಲ 17 ರನ್ ಸಿಡಿಸಿ ಔಟಾರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದ CSKಗೆ ನಾಯಕ ಎಂ.ಎಸ್.ಧೋನಿ ಹಾಗೂ ಅಂಬಾಟಿ ರಾಯುಡು ಅಂತಿಮ ಹಂತದಲ್ಲಿ ಅಬ್ಬರಿಸಿದರು. ಧೋನಿ ಅಜೇಯ 37 ರನ್ ಸಿಡಿಸಿದರೆ, ರಾಯುಡು ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 3 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿತು.