5 ಪಂದ್ಯ ಸೋತರೂ RCBಗೆ ಇನ್ನೂ ಇದೇ ಪ್ಲೇ ಆಫ್ ಅವಕಾಶ!
ಆರಂಭಿಕ 5 ಪಂದ್ಯಗಳನ್ನ ಸೋತಿರುವ RCB ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡುತ್ತಾ? ಈ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಕಾಡುತ್ತಿದೆ. ಸೋಲನ್ನೇ ಹಾಸು ಹೊದ್ದು ಮಲಗಿರುವ ಬೆಂಗಳೂರು ತಂಡಕ್ಕೆ ಅವಕಾಶ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು(ಏ.06): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೀವ್ರ ಹಿನ್ನಡೆ ಅನುಭವಿಸಿದೆ. ಆರಂಭಿಕ 5 ಪಂದ್ಯಗಳನ್ನೂ ಸೋತು ಗೆಲುವಿಗಾಗಿ ಪರಿತಪಿಸುತ್ತಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 205 ರನ್ ಸಿಡಿಸಿ ಪಂದ್ಯವನ್ನು ಕೈಚೆಲ್ಲಿತು. RCB ತಂಡದಲ್ಲೇನೋ ಸಮಸ್ಯೆ ಇದೆ ಅನ್ನೋದು ಸತ್ಯ. ಆದರೆ 5 ಪಂದ್ಯ ಸೋತಿದೆ ಅನ್ನೋ ಕಾರಣಕ್ಕೆ ಪ್ಲೇ ಆಫ್ ಅವಕಾಶವಿಲ್ಲ ಎಂದಲ್ಲ.
ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!
ಪ್ಲೇ ಆಫ್ ಹಂತಕ್ಕೇರಲು ಕನಿಷ್ಟ 7 ಪಂದ್ಯ ಗೆಲ್ಲಲೇಬೇಕು. ಹಾಗಂತ 7 ಪಂದ್ಯ ಗೆದ್ದರೆ ಸಾಕು ಎಂದಲ್ಲ. ಸದ್ಯ RCB ಪರಿಸ್ಥಿತಿ ಶೋಚನೀಯವಾಗಿದೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಅವಕಾಶ ಇನ್ನೂ ಕೈತಪ್ಪಿಹೋಗಿಲ್ಲ ಅನ್ನೋದೇ ಸಮಾಧಾನ. 7 ಪಂದ್ಯಗಳನ್ನ ಸೋತು ಪ್ರಶಸ್ತಿ ಗೆದ್ದ ಉದಾಹರಣೆಗಳಿವೆ. 2009ರಲ್ಲಿ ಡೆಕ್ಕನ್ ಚಾರ್ಜಸ್ ಲೀಗ್ ಹಂತದಲ್ಲಿ 7 ಪಂದ್ಯಗಳನ್ನು ಸೋತಿತ್ತು. ಆದರೆ ಇನ್ನುಳಿದ 7 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಬಳಿಕ ಚಾಂಪಿಯನ್ ಆಗಿ ಮರೆದಾಡಿತ್ತು.
ಇದನ್ನೂ ಓದಿ: 205 ರನ್ ಸಿಡಿಸಿ, 7 ಬೌಲರ್ ಇದ್ರೂ ರಸೆಲ್ ಸುನಾಮಿಗೆ ಕೊಚ್ಚಿ ಹೋಯ್ತು RCB
2010ರಲ್ಲಿ CSK ಲೀಗ್ ಹಂತದಲ್ಲಿ 7 ಪಂದ್ಯಗಳನ್ನು ಸೋತಿತ್ತು. ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿತ್ತು. ಬಳಿಕ CSK ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2014ರಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ 5 ಪಂದ್ಯಗಳನ್ನು ಸೋತು ಬಳಿಕ ಚಾಂಪಿಯನ್ ಆಗಿತ್ತು. ಇದೀಗ ಬೆಂಗಳೂರು ಕೂಡ ಆರಂಭಿಕ 5 ಪಂದ್ಯಗಳನ್ನು ಸೋತಿದೆ. ಇನ್ನುಳಿದ ಪಂದ್ಯ ಗೆದ್ದರೆ ಪ್ಲೇ ಆಫ್ ಅವಕಾಶ ಖಚಿತವಾಗಲಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಕಮ್‌ಬ್ಯಾಕ್ ಮಾಡಲೇಬೇಕು.