ಏಪ್ರಿಲ್ 7ರಿಂದ ಐಪಿಎಲ್ ಹಬ್ಬ ಶುರು : ವೇಳೆಯಲ್ಲಿ ಕೊಂಚ ಬದಲಾವಣೆ

First Published 22, Jan 2018, 10:25 PM IST
IPL 2018 to begin on April 7 in Mumbai
Highlights

.

ನವದೆಹಲಿ(ಜ.22): 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್  ಪಂದ್ಯಾವಳಿ ಏಪ್ರಿಲ್ 7ರಿಂದ ಆರಂಭಗೊಳ್ಳಲಿದ್ದು, ಮೇ 27ರ ವರೆಗೂ ನಡೆಯಲಿದೆ.

ಏ.6ರಂದು ಮುಂಬೈನಲ್ಲೇ ಅದ್ಧೂರಿ ಉದ್ಘಾಟನಾ ಸಮಾರಂಭ ಸಹ ಆಯೋಜಿಸಲಾಗಿದೆ.  ಉದ್ಘಾಟನಾ ಹಾಗೂ ಫೈನಲ್ ಪಂದ್ಯ ಎರಡಕ್ಕೂ ಮುಂಬೈ ಆತಿಥ್ಯ ವಹಿಸಲಿದೆ. ಪಂದ್ಯಗಳ ಆರಂಭದ ಸಮಯವನ್ನು ಈ ಬಾರಿ ಬಿಸಿಸಿಐ ಬದಲಿಸಿದ್ದು, ರಾತ್ರಿ 8ರ ಸಂಜೆ 7ಕ್ಕೆ, ಸಂಜೆ 4ರ ಪಂದ್ಯ ಮಧ್ಯಾಹ್ನ 5.30ಕ್ಕೆ ಆರಂಭವಾಗಲಿದೆ.

ಆಟಗಾರರ ಹರಾಜು ಜ.27, 28ರಂದು ಬೆಂಗಳೂರಲ್ಲಿ ನಡೆಯಲಿದ್ದು, 360 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 578 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 8 ತಂಡಗಳು ಒಟ್ಟು 18 ಆಟಗಾರರನ್ನು ಉಳಿಸಿಕೊಂಡಿವೆ.

loader