ಐಪಿಎಲ್'ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಈ ಸ್ಟಾರ್ 10 ಆಟಗಾರರನ್ನು ಕೈಬಿಟ್ಟಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಹಾಗಾದರೆ ಯಾರು ಆ ಆಟಗಾರರು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದ ರೀಟೈನ್ ಆಟಗಾರರ ಪಟ್ಟಿ ಇದೀಗ ಪ್ರಾಂಚೈಸಿಗಳು ಬಹಿರಂಗ ಪಡಿಸಿದ್ದಾರೆ. ಆರ್'ಸಿಬಿ ಕೊಹ್ಲಿ, ಎಬಿಡಿ, ಸರ್ಫ್ರಾಜ್ ಖಾನ್ ಅವರನ್ನು ಉಳಿಸಿಕೊಂಡರೆ, ಮುಂಬೈ ರೋಹಿತ್ ಶರ್ಮಾ, ಚೆನ್ನೈ ಧೋನಿ, ರೈನಾ ಉಳಿಸಿಕೊಂಡಿದೆ.

ಆದರೆ ಐಪಿಎಲ್'ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಈ ಸ್ಟಾರ್ 10 ಆಟಗಾರರನ್ನು ಕೈಬಿಟ್ಟಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಹಾಗಾದರೆ ಯಾರು ಆ ಆಟಗಾರರು ಎನ್ನುವುದಕ್ಕೆ ಇಲ್ಲಿದೆ ಉತ್ತರ.

1. ರಶೀದ್ ಖಾನ್:

ಆಫ್ಘಾನಿಸ್ತಾನದ ಯುವ ಪ್ರತಿಭೆ. ಸನ್'ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದ ಈ ಲೆಗ್ ಸ್ಪಿನ್ನರ್ ಕಳೆದ ಆವೃತ್ತಿಯಲ್ಲಿ ಎರಡನೇ ಗರಿಷ್ಠ ವಿಕೆಟ್ ಕಿತ್ತ ಬೌಲರ್ ಎನಿಸಿದ್ದರು.

2. ರವಿಚಂದ್ರನ್ ಅಶ್ವಿನ್:

ಚುಟುಕು ಕ್ರಿಕೆಟ್'ನ ಮಾಂತ್ರಿಕ ಸ್ಪಿನ್ನರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವೆಂದು ಗುರುತಿಸಿಕೊಂಡಿದ್ದ ಅಶ್ವಿನ್ ಈ ಬಾರಿ ಬೇರೆ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

3. ಕ್ರಿಸ್ ಗೇಲ್:

ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಸೀಮಿತ ಕ್ರಿಕೆಟ್'ನಲ್ಲಿ ಸ್ಫೋಟಕ ಬ್ಯಾಟ್ಸ್'ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದರಿಂದ ಆರ್'ಸಿಬಿ ಪ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಮನಸ್ಸು ಮಾಡಿಲ್ಲ.

4. ಗೌತಮ್ ಗಂಭೀರ್:

ಕೋಲ್ಕತ ನೈಟ್'ರೈಡರ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಗೌತಮ್ ಗಂಭೀರ್ ಅವರನ್ನು ಕೈಬಿಟ್ಟಿರುವುದು ನಿಜಕ್ಕೂ ಅಚ್ಚರಿಯೇ ಸರಿ. ಗಂಭೀರ್ ಡೆಲ್ಲಿ ತಂಡವನ್ನು ಮುನ್ನಡೆಸುವ ಯೋಚನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

5. ಬ್ರೆಂಡನ್ ಮೆಕ್ಲಮ್:

ಟಿ20 ಕ್ರಿಕೆಟ್'ನ ಉಪಯುಕ್ತ ಕ್ರಿಕೆಟಿಗ ಮೆಕ್ಲಮ್ ಬ್ಯಾಟಿಂಗ್ ಹಾಗೂ ಕೀಪಿಂಗ್'ನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಆದರೆ ಸಿಎಸ್'ಕೆ ಮೆಕ್ಲಮ್ ಅವರನ್ನು ರೀಟೈನ್ ಮಾಡಿಕೊಂಡಿಲ್ಲ.

6. ಯುಜವೇಂದ್ರ ಚಾಹಲ್:

2017ನೇ ಸಾಲಿನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿರುವ ಚಾಹಲ್ ಅವರನ್ನು ಆರ್'ಸಿಬಿ ರೀಟೈನ್ ಮಾಡಿಕೊಂಡಿಲ್ಲ.

7. ಡ್ವೇನ್ ಬ್ರಾವೋ:

ಟಿ20 ಕ್ರಿಕೆಟ್ ಮತ್ತೋರ್ವ ಸೂಪರ್ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಅವರನ್ನು ಸಿಎಸ್'ಕೆ ರೀಟೈನ್ ಮಾಡಿಕೊಂಡಿಲ್ಲ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್'ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಾ ಬಂದಿರುವ ಬ್ರಾವೋ ಯಾವ ತಂಡ ಸೇರುತ್ತಾರೆ ಕಾದು ನೋಡಬೇಕಿದೆ.

8. ಕ್ರಿಸ್ ಲಿನ್:

ಕೆಕೆಆರ್ ಪರ ಕಳೆದ ಆವೃತ್ತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಕ್ರಿಸ್ ಲಿನ್ ಅವರನ್ನು ಪ್ರಾಂಚೈಸಿಗಳು ಉಳಿಸಿಕೊಂಡಿಲ್ಲ.

9. ಶಿಖರ್ ಧವನ್:

ಟೀಂ ಇಂಡಿಯಾ ಪರ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಉತ್ತಮ ರನ್ ಕಲೆ ಹಾಕಿರುವ ಧವನ್ ಅವರನ್ನು ಹೈದರಾಬಾದ್ ಪ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿಲ್ಲ.

10. ಕ್ವಿಂಟನ್ ಡಿ ಕಾಕ್:

ದಕ್ಷಿಣ ಆಫ್ರಿಕಾದ ಯುವ ಪ್ರತಿಭೆ, ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ರೀಟೈನ್ ಮಾಡಿಕೊಂಡಿಲ್ಲ.