ಈಗಾಗಲೇ ಸನ್‌ರೈಸರ್ಸ್‌, ಚೆನ್ನೈ, ಕೋಲ್ಕತಾ ಪ್ಲೇ ಆಫ್‌ಗೇರಿವೆ. ಇನ್ನುಳಿದ 1 ಸ್ಥಾನಕ್ಕೆ ಮುಂಬೈ, ರಾಜಸ್ಥಾನ, ಪಂಜಾಬ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಇನ್ನೇನಿದ್ದರೂ ರನ್‌ರೇಟ್ ತಂಡಗಳ ಹಣೆಬರಹ ನಿರ್ಧರಿಸಲಿದೆ.

ನವದೆಹಲಿ(ಮೇ.20]: ಐಪಿಎಲ್ 11ನೇ ಆವೃತ್ತಿ ಟೂರ್ನಿಯ ಮೊದಲ ಹಂತ ಬಹುತೇಕ ಪೂರ್ಣಗೊಂಡಿದ್ದು, ಲೀಗ್ ಹಂತದಲ್ಲಿ ಇನ್ನು ಕೇವಲ 2 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇದರೊಂದಿಗೆ ಪ್ಲೇ-ಆಫ್ ಲೆಕ್ಕಾಚಾರ ಆರಂಭವಾಗಿದ್ದು, ಪಟ್ಟಿಯಲ್ಲಿ ಮೊದಲ 4 ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್‌ಗೇರಲಿವೆ.

ಈಗಾಗಲೇ ಸನ್‌ರೈಸರ್ಸ್‌, ಚೆನ್ನೈ, ಕೋಲ್ಕತಾ ಪ್ಲೇ ಆಫ್‌ಗೇರಿವೆ. ಇನ್ನುಳಿದ 1 ಸ್ಥಾನಕ್ಕೆ ಮುಂಬೈ, ರಾಜಸ್ಥಾನ, ಪಂಜಾಬ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಇನ್ನೇನಿದ್ದರೂ ರನ್‌ರೇಟ್ ತಂಡಗಳ ಹಣೆಬರಹ ನಿರ್ಧರಿಸಲಿದೆ.
ಇಂದು ಲೀಗ್‌ಗೆ ತೆರೆ:
ಇಂದು ಚೆನ್ನೈ ಹಾಗೂ ಪಂಜಾಬ್ ನಡುವಿನ ಪಂದ್ಯದ ಮೂಲಕ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ. ಮಂಗಳವಾರ ಮುಂಬೈನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಕೋಲ್ಕತಾದಲ್ಲಿ ಬುಧವಾರ ಎಲಿಮಿನೇಟರ್ ಹಾಗೂ ಶುಕ್ರವಾರ 2ನೇ ಕ್ವಾಲಿಫೈಯರ್ ನಡೆದರೆ, ಭಾನುವಾರ ಮುಂಬೈನಲ್ಲಿ ಫೈನಲ್ ನಡೆಯಲಿದೆ.

1. ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ 12 ಅಂಕಗಳಿಸಿದ್ದು, ಮುಂದಿನ ಹಂತಕ್ಕೇರಬೇಕಾದರೆ ಇಂದು ಡೆಲ್ಲಿ ವಿರುದ್ಧ ಗೆಲ್ಲಲೇಬೇಕಾಗಿದೆ. 

2. 14 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿರುವ ರಾಜಸ್ಥಾನ 14 ಅಂಕಗಳೊಂದಿಗೆ ಸದ್ಯ 4ನೇ ಸ್ಥಾನದಲ್ಲಿದ್ದು, ಇಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ಮತ್ತು ಪಂಜಾಬ್ ಸೋತರೆ ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ.

3. ಪಂಜಾಬ್ ಸಹ 13 ಪಂದ್ಯಗಳಿಂದ 12 ಅಂಕ ಗಳಿಸಿದ್ದು, ಇಂದು ಚೆನ್ನೈ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅತ್ಯುತ್ತಮ ರನ್ ರೇಟ್‌’ನಿಂದ ಗೆದ್ದರೆ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ.