ಸವಾಲಿನ ಮೊತ್ತ ಕಲೆ ಹಾಕಿದ ಡೆಲ್ಲಿ ಡೇರ್’ಡೆವಿಲ್ಸ್

IPL 2018 Pant 64 Shankar cameo help Delhi set 175 as target for MI
Highlights

9 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 75 ರನ್ ಪೇರಿಸಿದ್ದ ಡೆಲ್ಲಿಗೆ ಪಂತ್ ಹಾಗೂ ವಿಜಯ್ ಶಂಕರ್ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. 4ನೇ ವಿಕೆಟ್’ಗೆ ಈ ಜೋಡಿ 64 ರನ್’ಗಳ ಜತೆಯಾಟವಾಡಿತು. 

ನವದೆಹಲಿ[ಮೇ.20]: ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಶಭ್ ಪಂತ್[64] ಆಕರ್ಷಕ ಅರ್ಧಶತಕ, ಕೊನೆಯಲ್ಲಿ ವಿಜಯ್ ಶಂಕರ್[43] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್’ಡೆವಿಲ್ಸ್ 174 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್’ಡೆವಿಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ಮೂರು ಓವರ್’ಗಳಲ್ಲಿ 10ರ ಸರಾಸರಿಯಲ್ಲಿ 30 ರನ್ ಕಲೆ ಹಾಕಿತು. ನಾಲ್ಕನೇ ಓವರ್’ನ ಮೊದಲ ಎಸೆತದಲ್ಲೇ ಮುಂಬೈ ಪಡೆಯ ಚುರುಕಿನ ಕ್ಷೇತ್ರರಕ್ಷಣೆಗೆ ಪೃಥ್ವಿ ಶಾ ಪೆವಿಲಿಯನ್ ಸೇರಬೇಕಾಯಿತು. ಮತ್ತೋರ್ವ ಆರಂಭಿಕ ಮ್ಯಾಕ್ಸ್’ವೆಲ್ 22 ರನ್ ಸಿಡಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಾಯಕ ಶ್ರೇಯಸ್ ಆಟ ಕೇವಲ 6 ರನ್’ಗಳಿಗೆ ಸೀಮಿತವಾಯಿತು.
ಡೆಲ್ಲಿಗೆ ಬಲ ತುಂಬಿದ ಪಂತ್-ವಿಜಯ್ ಶಂಕರ್: 9 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 75 ರನ್ ಪೇರಿಸಿದ್ದ ಡೆಲ್ಲಿಗೆ ಪಂತ್ ಹಾಗೂ ವಿಜಯ್ ಶಂಕರ್ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. 4ನೇ ವಿಕೆಟ್’ಗೆ ಈ ಜೋಡಿ 64 ರನ್’ಗಳ ಜತೆಯಾಟವಾಡಿತು. ಪಂತ್ 44 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್’ಗಳ ನೆರವಿನಿಂದ 64 ರನ್ ಚಚ್ಚಿದರೆ, ವಿಜಯ್ ಶಂಕರ್ 30 ಎಸೆತಗಳಲ್ಲಿ 43 ರನ್ ಸಿಡಿಸಿ ಅಜೇಯರಾಗುಳಿದರು. ಕೊನೆಯದಲ್ಲಿ ಅಭಿಷೇಕ್ ಶರ್ಮಾ 15 ರನ್ ಬಾರಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.
ಮುಂಬೈ ಪರ ಕೃನಾಲ್, ಮಾರ್ಕಂಡೆ ಹಾಗೂ ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಡೆಲ್ಲಿ ಡೇರ್’ಡೆವಿಲ್ಸ್: 174/4
ರಿಶಭ್ ಪಂತ್: 64
ಕೃನಾಲ್ ಪಾಂಡ್ಯ: 11/1
[* ವಿವರ ಅಪೂರ್ಣ]
 

loader