ಐಪಿಎಲ್ ಅವಾರ್ಡ್ಸ್: ’ಪರ್ಫೆಕ್ಟ್ ಕ್ಯಾಚ್’ ಅವಾರ್ಡ್ ಯಾರಿಗೆ ಗೊತ್ತಾ..?

IPL 2018 List of individual award winners
Highlights

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲಿದೆ ಆ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ...

ಬೆಂಗಳೂರು[ಮೇ.28]: ಎರಡು ತಿಂಗಳ ಚುಟುಕು ಕ್ರಿಕೆಟ್ ಹಬ್ಬವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಚೆನ್ನೈ ಸೂಪರ್’ಕಿಂಗ್ಸ್ ಚಾಂಪಿಯನ್ ಆಗುವುದರೊಂದಿಗೆ ತೆರೆಬಿದ್ದಿದೆ. 11ನೇ ಆವೃತ್ತಿಯ ಟೂರ್ನಿಯು ಸಾಕಷ್ಟು ಯುವ ಪ್ರತಿಭೆಗಳನ್ನು ಅನಾವರಣ ಮಾಡಿತು. ಪೃಥ್ವಿ ಶಾ, ಸಂದೀಪ್ ಲೆಮಿಚಾನೆ, ರಿಶಭ್ ಪಂತ್ ಮುಂತಾದ ಕ್ರಿಕೆಟಿಗರು ಸಾಕಷ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲಿದೆ ಆ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ...
ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ: ಶೇನ್ ವಾಟ್ಸನ್
ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 117 ರನ್ ಸಿಡಿಸಿದ ಶೇನ್ ವಾಟ್ಸನ್ ಸಹಜವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಮರ್ಜಿಂಗ್ ಪ್ಲೇಯರ್ ಆಫ್ ದ ಸೀಸನ್: ರಿಶಭ್ ಪಂತ್
ಆಡಿದ 14 ಪಂದ್ಯಗಳಲ್ಲಿ ರಿಶಭ್ ಪಂತ್ 684 ರನ್ ಸಿಡಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಕಲೆಹಾಕಿದ ಆಟಗಾರ ಎನಿಸಿದ್ದಾರೆ. 
ಪರ್ಫೆಕ್ಟ್ ಕ್ಯಾಚ್ ಆಪ್ ದ ಸೀಸನ್: ಟ್ರಂಟ್ ಬೌಲ್ಟ್
ಡೆಲ್ಲಿ ಡೇರ್’ಡೆವಿಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಹಿಡಿದಿದ್ದ ಟ್ರೆಂಟ್ ಬೌಲ್ಟ್ ಪರ್ಫೆಕ್ಟ್ ಕ್ಯಾಚ್ ಆಪ್ ದ ಸೀಸನ್ ಪ್ರಶಸ್ತಿ ಗೆದ್ದುಕೊಂಡರು.
ಸ್ಟೈಲಿಶ್ ಪ್ಲೇಯರ್ ಆಫ್ ದ ಮ್ಯಾಚ್: ರಿಶಭ್ ಪಂತ್
ಡೆಲ್ಲಿ ಡೇರ್’ಡೆವಿಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಶಬ್ ಪಂತ್ ಅತಿ ಹೆಚ್ಚು ಬೌಂಡರಿ[68], ಅತಿ ಹೆಚ್ಚು ಸಿಕ್ಸರ್[37] ಜತೆಗೆ ಹೈದರಾಬಾದ್ ವಿರುದ್ಧ [ಅಜೇಯ 128] ಗರಿಷ್ಠ ರನ್ ಕಲೆಹಾಕಿದ್ದಾರೆ.
ಪರ್ಪಲ್ ಕ್ಯಾಪ್: ಆ್ಯಂಡ್ರೊ ಟೈ
ಪ್ರಸಕ್ತ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ ಆ್ಯಂಡ್ರೊ ಟೈ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡರು. ಪ್ರಶಸ್ತಿ ಬಗ್ಗೆ ಮಾತನಾಡಿದ ಟೈ, ನಾನು ಈ ಪರ್ಪಲ್ ಕ್ಯಾಪ್ ಅನ್ನು ತುಂಬಾ ಗೌರವದಿಂದ ಸ್ವೀಕರಿಸುತ್ತೇನೆ. ಭಾರತ ಒಂದು ಅದ್ಭುತ ದೇಶವಾಗಿದ್ದು ಇಲ್ಲಿಂದ ಸಾಕಷ್ಟು ನೆನಪುಗಳನ್ನು ತವರಿಗೆ ಕೊಂಡ್ಯೊಯುತ್ತಿದ್ದೇನೆ. ನಮ್ಮ ತಂಡ ಫೈನಲ್’ಗೇರದಿದ್ದದ್ದು ದುರದೃಷ್ಟಕರ. ಆದರೆ ಮುಂದಿನ ವರ್ಷ ಖಂಡಿತಾ ಕಮ್’ಬ್ಯಾಕ್ ಮಾಡುತ್ತೇವೆ ಎಂದು ಪಂಜಾಬ್ ತಂಡದ ಸ್ಟಾರ್ ಬೌಲರ್ ಹೇಳಿದ್ದಾರೆ.
ಆರೆಂಜ್ ಕ್ಯಾಪ್: ಕೇನ್ ವಿಲಿಯಮ್ಸನ್
ಸನ್’ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ 17 ಪಂದ್ಯಗಳಲ್ಲಿ 735 ರನ್ ಸಿಡಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್: ಸುನಿಲ್ ನರೈನ್
ಕೋಲ್ಕತಾ ನೈಟ್’ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಸುನಿಲ್ ನರೈನ್ ಈ ಆವೃತ್ತಿ ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಆಡಿದ 16 ಪಂದ್ಯಗಳಲ್ಲಿ 357 ರನ್ ಹಾಗೂ 17 ವಿಕೆಟ್ ಕಬಳಿಸಡಿದ್ದಾರೆ.
ಸೂಪರ್ ಸ್ಟ್ರೈಕರ್ ಆಪ್ ದ ಇಯರ್: ಸುನಿಲ್ ನರೈನ್
ಕಳೆದ ಆವೃತ್ತಿಯಂತೆ ಈ ಬಾರಿಯೂ ಸುನಿಲ್ ನರೈನ್ ಸ್ಫೋಟಕ  ಬ್ಯಾಟಿಂಗ್ ನಡೆಸುವ ಮೂಲಕ ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್ ಪ್ರಶಸ್ತಿ ಗೆದ್ದುಕೊಂಡರು.
ಫೇರ್ ಪ್ಲೇ ಅವಾರ್ಡ್: ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿದ್ದರೂ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುವ ಮೂಲಕ ಫೇರ್ ಪ್ಲೇ ಪ್ರಶಸ್ತಿ ಮುಡುಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಿಚ್ ಆ್ಯಂಡ್ ಗ್ರೌಂಡ್ ಅವಾರ್ಡ್: ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್ ಹಾಗೂ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್
ಏಳಕ್ಕೂ ಹೆಚ್ಚು ಪಂದ್ಯಗಳಿಗೆ ಆತಿಥ್ಯ ವಹಿಸಿಕೊಟ್ಟಿದ್ದ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್ ಮೈದಾನ ಪಿಚ್ ಆ್ಯಂಡ್ ಗ್ರೌಂಡ್ ಅವಾರ್ಡ್ ಪ್ರಶಸ್ತಿ ಬಾಚಿಕೊಂಡಿತು.

loader