ಹೈದರಾಬಾದ್ ಮಣಿಸಿ ಪ್ಲೇ ಆಫ್’ಗೆ ಲಗ್ಗೆಯಿಟ್ಟ ಕೆಕೆಆರ್

IPL 2018 Kolkata win by five wickets seal playoffs berth
Highlights

ಕ್ರಿಸ್ ಲಿನ್ ಆಕರ್ಷಕ ಅರ್ಧಶತಕ, ಉತ್ತಪ್ಪ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 5 ವಿಕೆಟ್’ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಪ್ಲೇ ಆಫ್ ಹಂತವನ್ನು ಖಚಿತ ಪಡಿಸಿಕೊಂಡಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದು 16 ಅಂಕಗಳೊಂದಿಗೆ ಮೂರನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಿದೆ.

ಹೈದರಾಬಾದ್[ಮೇ.19]: ಕ್ರಿಸ್ ಲಿನ್ ಆಕರ್ಷಕ ಅರ್ಧಶತಕ, ಉತ್ತಪ್ಪ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 5 ವಿಕೆಟ್’ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಪ್ಲೇ ಆಫ್ ಹಂತವನ್ನು ಖಚಿತ ಪಡಿಸಿಕೊಂಡಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದು 16 ಅಂಕಗಳೊಂದಿಗೆ ಮೂರನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಿದೆ.
ಹೈದರಾಬಾದ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಕೆಕೆಆರ್ ಇನ್ನೆರಡು ಎಸೆತ ಬಾಕಿ ಇರುವಂತೆ ಗೆಲುವಿನ ಕೇಕೆ ಹಾಕಿತು. ಕೋಲ್ಕತಾ ಪರ ಲಿನ್[55], ಉತ್ತಪ್ಪ[44] ಹಾಗೂ ನಾಯಕ ದಿನೇಶ್ ಕಾರ್ತಿಕ್[26*] ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 
ಹೈದರಾಬಾದ್ ಪರ ಕೌಲ್ ಹಾಗೂ ಬ್ರಾಥ್’ವೈಟ್ ತಲಾ 2 ವಿಕೆಟ್ ಪಡೆದರೆ, ಶಕೀಬ್ ಒಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಶಿಖರ್ ಧವನ್ ಅರ್ಧಶತಕದ ನೆರವಿನಿಂದ 172 ರನ್ ಕಲೆಹಾಕಿತ್ತು. 
ಸಂಕ್ಷಿಪ್ತ ಸ್ಕೋರ್:
SRH: 172/9
ಧವನ್: 50
ಪ್ರಸಿದ್ಧ್ : 30/4  
KKR: 173/5
ಲಿನ್: 55
ಬ್ರಾಥ್’ವೈಟ್: 21/2

loader