ಸನ್'ರೈಸರ್ಸ್ ಹೈದರಾಬಾದ್'ಗೆ ಬಿಗ್ ಶಾಕ್; ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್..!

First Published 25, Apr 2018, 3:44 PM IST
IPL 2018 Hyderabad Billy Stanlake Ruled Out of the Tournament
Highlights

ಹೈದರಾಬಾದ್ ಪರ ಈ ಬಾರಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್'ಗಳ ಪೈಕಿ ಒಬ್ಬರು ಎಂದು ಗುರುತಿಸಿಕೊಂಡಿದ್ದ ಸ್ಟ್ಯಾನ್'ಲೇಕ್, ಆಡಿದ 5 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

ಹೈದರಾಬಾದ್(ಏ.25): ಪ್ರಸಕ್ತ ಐಪಿಎಲ್'ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಸನ್'ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಆಸೀಸ್ ವೇಗಿ ಬಿಲ್ಲಿ ಸ್ಟ್ಯಾನ್ ಲೇಕ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್'ನಿಂದ ಹೊರಬಿದ್ದಿದ್ದಾರೆ.

ಭಾನುವಾರ ಚೆನ್ನೈ ವಿರುದ್ಧ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಳೆ ಆಸ್ಟ್ರೇಲಿಯಾ ವೇಗಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಆಸ್ಟ್ರೇಲಿಯಾಗೆ ಹಿಂದಿರುಗಿದ್ದಾರೆ.

ಹೈದರಾಬಾದ್ ಪರ ಈ ಬಾರಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್'ಗಳ ಪೈಕಿ ಒಬ್ಬರು ಎಂದು ಗುರುತಿಸಿಕೊಂಡಿದ್ದ ಸ್ಟ್ಯಾನ್'ಲೇಕ್, ಆಡಿದ 5 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

loader