ಚೆನ್ನೈ ಸೂಪರ್'ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು 2 ವರ್ಷಗಳ ನಿಷೇಧದ ಬಳಿಕ ಮತ್ತೆ ಐಪಿಎಲ್'ಗೆ ಕಮ್'ಬ್ಯಾಕ್ ಮಾಡುತ್ತಿದ್ದು, ಎರಡು ಪ್ರಾಂಚೈಸಿಗಳು 2015ರ ಆವೃತ್ತಿಯಲ್ಲಿ ತಮ್ಮ ತಂಡದಲ್ಲಿದ್ದ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.
ಬೆಂಗಳೂರು(ಡಿ.22): ಬಹುನಿರೀಕ್ಷಿತ 2018ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ದವಾಗಿದ್ದು, ಜನವರಿ 27&28ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಎಲ್ಲಾ ಪ್ರಾಂಚೈಸಿಗಳು ತಾವು ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ಹೆಸರನ್ನು ಜ.4ರೊಳಗೆ ತಿಳಿಸಬೇಕೆಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.
ಹರಾಜಿಗೂ ಮುನ್ನ ಪ್ರತಿ ತಂಡಕ್ಕೆ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಇನ್ನು ಜ.18ರಂದು ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸುವುದಾಗಿ ಬಿಸಿಸಿಐ ತಿಳಿಸಿದೆ.
ಚೆನ್ನೈ ಸೂಪರ್'ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು 2 ವರ್ಷಗಳ ನಿಷೇಧದ ಬಳಿಕ ಮತ್ತೆ ಐಪಿಎಲ್'ಗೆ ಕಮ್'ಬ್ಯಾಕ್ ಮಾಡುತ್ತಿದ್ದು, ಎರಡು ಪ್ರಾಂಚೈಸಿಗಳು 2015ರ ಆವೃತ್ತಿಯಲ್ಲಿ ತಮ್ಮ ತಂಡದಲ್ಲಿದ್ದ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.
ಇದೇ ವೇಳೆ ಐಪಿಎಲ್ ಹರಾಜಿನ ಹಿನ್ನೆಲೆಯಲ್ಲಿ ತಂಡಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ, ದೇಸಿ ಟಿ20 ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಬದಲಿಸಿದೆ. ಜ.21-29ರ ವರೆಗೂ ನಡೆಯಬೇಕಿದ್ದ ವಲಯ ಮಟ್ಟದ ಟೂರ್ನಿ ಜ.8-16ರ ವರೆಗೂ ನಡೆಯಲಿದ್ದು, ಫೆ.4-10ರ ವರೆಗೂ ನಡೆಯಬೇಕಿದ್ದ ಮುಷ್ತಾಕ್ ಅಲಿ ಟೂರ್ನಿ ಜ.21-27ರ ವರೆಗೂ ನಡೆಯಲಿದೆ.