Asianet Suvarna News Asianet Suvarna News

IPL ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಸ್ಥಾನ ತುಂಬಬಲ್ಲ ಟಾಪ್-5 ಆಟಗಾರರಿವರು

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸೀಸ್ ನಾಯಕ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ತಲೆದಂಡವಾಗಿದೆ. ಒಂದು ವರ್ಷದ ಮಟ್ಟಿಗೆ ಈ ಇಬ್ಬರು ಆಟಗಾರರ ಮೇಲೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಇನ್ನು ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಐಪಿಎಲ್'ನಿಂದಲೂ ಈ ಆಟಗಾರರು ಹೊರಬಿದ್ದಿದ್ದು, ಸನ್'ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ತಂಡ ಕಣಕ್ಕಿಳಿಯುತ್ತಿದೆ. ಇದೇವೇಳೆ ವಾರ್ನರ್ ಸ್ಥಾನ ತುಂಬಬಲ್ಲ ಟಾಪ್-5 ಆಟಗಾರರ ಪಟ್ಟಿ ನಿಮ್ಮ ಮುಂದೆ..

IPL 2018 5 players who can replace David Warner

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸೀಸ್ ನಾಯಕ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ತಲೆದಂಡವಾಗಿದೆ. ಒಂದು ವರ್ಷದ ಮಟ್ಟಿಗೆ ಈ ಇಬ್ಬರು ಆಟಗಾರರ ಮೇಲೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಇನ್ನು ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಐಪಿಎಲ್'ನಿಂದಲೂ ಈ ಆಟಗಾರರು ಹೊರಬಿದ್ದಿದ್ದು, ಸನ್'ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ತಂಡ ಕಣಕ್ಕಿಳಿಯುತ್ತಿದೆ. ಇದೇವೇಳೆ ವಾರ್ನರ್ ಸ್ಥಾನ ತುಂಬಬಲ್ಲ ಟಾಪ್-5 ಆಟಗಾರರ ಪಟ್ಟಿ ನಿಮ್ಮ ಮುಂದೆ..

#5. ಲೂಕ್ ರೋಂಚಿ:

ವಾರ್ನರ್ ಅನುಪಸ್ಥಿತಿಯಲ್ಲಿ ಸಧ್ಯದ ಫಾರ್ಮ್'ನಲ್ಲಿರುವ ಆಟಗಾರರನ್ನು ಗಮನಿಸುವುದಾದರೆ ಲೂಕ್ ರೋಂಚಿ ಸನ್'ರೈಸರ್ಸ್ ಪಾಲಿಗೆ ಉತ್ತಮ ಆಯ್ಕೆಯಾಗಬಹುದು. ಕೇವಲ 75 ಲಕ್ಷ ಮೂಲಬೆಲೆ ಹೊಂದಿದ್ದ ರೋಂಚಿಯನ್ನು ಹರಾಜಿನಲ್ಲಿ ಯಾವ ಪ್ರಾಂಚೈಸಿಯೂ ಖರೀಧಿಸಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಆಡಿದ 11 ಇನಿಂಗ್ಸ್'ನಲ್ಲಿ 43.50ರ ಸರಾಸರಿಯಂತೆ ರೋಂಚಿ 435 ರನ್ ಬಾರಿಸಿ ಇಸ್ಲಾಮಾಬಾದ್ ಯುನೈಟೈಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೇ ಸರಣಿಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದರು. ಮೇಲ್ಪಂಕ್ತಿ ಬ್ಯಾಟಿಂಗ್ ಜತೆಗೆ ರೋಂಚಿ ಉಪಯುಕ್ತ ವಿಕೆಟ್ ಕೀಪರ್ ಕೂಡಾ ಹೌದು.

#4. ಜೋ ರೂಟ್:

ಸಮಕಾಲೀನ ಕ್ರಿಕೆಟ್'ನಲ್ಲಿ ಅದ್ಭುತ ಬ್ಯಾಟ್ಸ್'ಮನ್'ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಲ್ಲ ಆಟಗಾರ ಜೋ ರೂಟ್. 25 ಅಂತರಾಷ್ಟ್ರೀಯ ಪಂದ್ಯವನ್ನಾಡಿ 40ರ ಸರಾಸರಿಯಲ್ಲಿ ರನ್'ಗಳಿಸಿರುವ ರೂಟ್ ವಾರ್ನರ್ ಸ್ಥಾನ ತುಂಬುವ ಸಾಮರ್ಥ್ಯವಿದೆ. ಸನ್'ರೈಸರ್ಸ್ ತಂಡದಲ್ಲಿ ಸ್ಥಾನ ಸಿಕ್ಕರೆ ಐಪಿಎಲ್'ನಲ್ಲಿ ಜೋ ರೂಟ್ ಕಮಾಲ್ ಮಾಡಬಹುದು.

#3. ಶಾನ್ ಮಾರ್ಶ್:

IPL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್'ಮನ್'ಗಳ ಪೈಕಿ ಆಸ್ಟ್ರೇಲಿಯಾ ಶಾನ್ ಮಾರ್ಶ್ ಕೂಡಾ ಒಬ್ಬರು. ಮೊದಲ 10 ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಮಾರ್ಶ್, 71 ಪಂದ್ಯಗಳಲ್ಲಿ 40ರ ಸರಾಸರಿಯಂತೆ 2477 ರನ್ ಬಾರಿಸಿದ್ದಾರೆ. ಧವನ್ ಜೊತೆಗೆ ಇನಿಂಗ್ಸ್ ಆರಂಭಿಸಲು ಶಾನ್ ಮಾರ್ಶ್ ಉತ್ತಮ ಆಯ್ಕೆಯಾಗಬಲ್ಲರು.

#2. ಮಾರ್ಟಿನ್ ಗುಪ್ಟಿಲ್:

IPL ವಿಚಾರಕ್ಕೆ ಬಂದರೆ ನ್ಯೂಜಿಲೆಂಡ್'ನ ಮಾರ್ಟಿನ್ ಗುಪ್ಟಿಲ್ ಅತ್ಯಂತ ನತದೃಷ್ಟ ಆಟಗಾರ ಎಂದರೆ ತಪ್ಪಾಗಲಾರದು. ಕೇವಲ 75 ಲಕ್ಷ ಮುಖಬೆಲೆ ಹೊಂದಿದ್ದರೂ ಯಾವೊಬ್ಬ ಪ್ರಾಂಚೈಸಿಯೂ ಈ ಬಾರಿ ಗುಪ್ಟಿಲ್ ಖರೀದಿಸುವ ಮನಸು ಮಾಡಲಿಲ್ಲ. ಇದುವರೆಗೂ ಕೇವಲ 10 IPL ಪಂದ್ಯಗಳನ್ನಾಡಿರುವ ಗುಪ್ಟಿಲ್ 35ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಆದರೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್'ನಲ್ಲಿ ಗರಿಷ್ಠ ರನ್(2271) ಕಲೆಹಾಕಿದ ಆಟಗಾರರೆನಿಸಿರುವ ಗುಪ್ಟಿಲ್ ಈ ಬಾರಿ ಧವನ್ ಜತೆಗೆ ಸ್ಫೋಟಕ ಇನಿಂಗ್ಸ್ ಕಟ್ಟಬಹುದು.

#1. ಹಾಶೀಂ ಆಮ್ಲಾ:

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿ ಅಚ್ಚರಿಗೆ ಕಾರಣವಾಗಿದ್ದು, ಹಾಶೀಂ ಆಮ್ಲಾ ಅವರು ಹರಾಜಾಗದೇ ಉಳಿದದ್ದು. ಕಳೆದ ಆವೃತ್ತಿಯೊಂದರಲ್ಲೇ 2 ಶತಕ ಸಿಡಿಸಿ ಗಮನ ಸೆಳೆದಿದ್ದ ಆಮ್ಲಾ ಈ ಬಾರಿ ವಾರ್ನರ್ ಸ್ಥಾನ ತುಂಬಬಲ್ಲ ಉಪಯುಕ್ತ ಆರಂಭಿಕ ಬ್ಯಾಟ್ಸ್'ಮನ್ ಎಂದರೆ ಅತಿಶಯೋಕ್ತಿಯಲ್ಲ. ಎರಡು ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 45ರ ಸರಾಸರಿಯಂತೆ 577 ರನ್ ಕಲೆಹಾಕಿರುವ ಆಮ್ಲಾ, ಈ ಬಾರಿ ಸನ್'ರೈಸರ್ಸ್ ಪಾಲಿಗೆ ಉಪಯುಕ್ತ ಆಯ್ಕೆ ಎನಿಸಬಹುದು.  

Follow Us:
Download App:
  • android
  • ios